ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಊರ ಪರವೂರ ಭಜನಾ ಮಂಡಳಿಗಳಿಂದ ಒಂದು ತಿಂಗಳ ಕಾಲ ಅಹೋರಾತ್ರಿ ಭಜನಾ ಮಹೋತ್ಸವ ಅಂಗವಾಗಿ ಉಡುಪಿಯಲ್ಲಿ ಪ್ರಥಮ ಬಾರಿಗೆ ಪಂಡರಾಪುರ ಶೈಲಿಯ ದಿಂಡಿ ಅದ್ದೂರಿ ಭಜನಾ ಮೆರವಣಿಗೆ ಮಂಗಳವಾರ ಸಂಜೆ ನಡೆಯಿತು.
ಶ್ರೀ ದೇವರ ಸನ್ನಿಧಿಯಲ್ಲಿ ಅರ್ಚಕ ವಿನಾಯಕ ಭಟ್ ಮತ್ತು ದಯಾಘನ್ ಭಟ್ ಸಾಮೂಹಿಕ ಪ್ರಾರ್ಥನೆ ಮಾಡಿ ಮಂಗಳಾರತಿ ಬೆಳಗಿಸಿದರು. ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ ದೀಪ ಬೇಳಗಿಸಿ ದಿಂಡಿ ಭಜನಾ ಯಾತ್ರೆಗೆ ಚಾಲನೆ ನೀಡಿದರು. ವಿವಿಧ ಭಜನಾ ತಂಡಗಳ ಸಹಕಾರ ದೊಂದಿಗೆ ಮೆರವಣಿಗೆ ದೇವಾಲಯದಿಂದ ಹೊರಟು ಐಡಿಯಲ್ ಸರ್ಕಲ್, ಡಯಾನಾ ಸರ್ಕಲ್ ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್, ಕೊಳದಪೇಟೆ ಮೂಲಕ ದೇವಾಲಯಕ್ಕೆ ಬಂದು ತಲುಪಿತು.
ಶ್ರೀ ವಿಠೋಭ ರುಖುಮಾಯಿ ದೇವರ ಪಲ್ಲಕಿಯೊಂದಿಗೆ ಪುರುಷರು ಕಚ್ಚೆ ಪಂಚೆ ಧೋತಿ ಟೋಪಿ ಧರಸಿ ಜೈ ವಿಠಲ್ -ಹರಿ ವಿಠಲ್ ನಾಮ ಪಠಿಸುತ್ತಾ ನಲಿದಾಡಿದರು. ಕೋಲಾಟ, ವಿವಿಧ ಬಗೆಯ ಸಾಂಪ್ರದಾಯಕ ಶೈಲಿಯ ವಸ್ತ್ರ ಧರಿಸಿ ಮಹಿಳೆಯರು , ಮಕ್ಕಳು ಭಜನೆ ಹಾಡಿ ಕುಣಿದರು. ಜನಾಕರ್ಷ ಟ್ಯಾಬ್ಲೊಗಳೊಂದಿಗೆ ಉಡುಪಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬಂತು.
ವಿಶ್ವನಾಥ್ ಭಟ್, ಪುಂಡಲೀಕ್ ಕಾಮತ, ಗಣೇಶ್ ಕಿಣಿ, ಅಶೋಕ ಬಾಳಿಗಾ , ರೋಹಿತಾಕ್ಷ ಪಡಿಯಾರ್ , ಉಮೇಶ್ ಪೈ , ಮಟ್ಟಾರ್ ವಸಂತ ಕಿಣಿ ಪ್ರಕಾಶ್ ಶೆಣೈ, ಪ್ರಕಾಶ್ ಭಕ್ತ, ನಾರಾಯಣ ಪ್ರಭು, ಭಜನಾ ಸಮಿತಿಯ ರೂವಾರಿ ಸತೀಶ್ ಕಿಣಿ , ವಿಶಾಲ್ ಶೆಣೈ , ಭಾಸ್ಕರ್ ಶೆಣೈ , ಉಮೇಶ ಪೈ ,ದೀಪಕ್ ಭಟ್ , ನಾರಾಯಣ ಭಟ್, ಗಿರೀಶ ಭಟ್, ನರಹರಿ ಪೈ, ವಿಶಾಲ್ ಶೆಣೈ, ಶಾಮ್ ಪ್ರಸಾದ್ ಕುಡ್ವಾ , ನಾಗೇಶ್ ಪೈ , ಯುವಕ ಮಂಡಲದ ಅಧ್ಯಕ್ಷ ನಿತೇಶ ಶೆಣೈ , ಭಜನಾ ಸಪ್ತಾಹ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು, ಶ್ರೀ ಲಕ್ಷ್ಮೀ ವೆಂಕಟೇಶ್ ಭಗಿನಿ ವೃಂದ ಹಾಗೂ ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಹಾಗೂ ವಿವಿಧ ಊರುಗಳಿಂದ ಆಗಮಿಸಿದ 2 ಸಾವಿರಕ್ಕೂ ಹೆಚ್ಚಿನ ಸಮಾಜ ಭಾಂದವರು ಉಪಸ್ಥಿತರಿದ್ದರು.