ಉಡುಪಿ: ಸುನಾಗ್ ಆಸ್ಪತ್ರೆಯ ವತಿಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ನಿರ್ದೇಶಕ ಡಾ. ನರೇಂದ್ರ ಕುಮಾರ್ ಎಚ್.ಎಸ್ ಹಾಗೂ ಡಾ. ವೀಣಾ ನರೇಂದ್ರ ಎಚ್.ಎಸ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಕನ್ನಡ ಸಾಹಿತಿ ಶ್ರೀಮತಿ ಇಂದಿರಾ ಹಾಲಂಬಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಸಿದರು.
ಸುನಾಗ್ ಆಸ್ಪತ್ರೆಯು ತನ್ನ ಐದು ವರ್ಶಗಳ ಸಾರ್ವಜನಿಕ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಸಂದರ್ಭದಲ್ಲಿ ಗೃಹ ಆರೈಕೆಯ ಸೇವೆಯನ್ನು ಪ್ರಾರಂಭಿಸಿದ್ದು, ಇದರ ಉದ್ಘಾಟನೆಯನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನರೇಂದ್ರ ಕುಮಾರ್ ಅವರ ತಾಯಿ ನಾಗರತ್ನ ನೆರವೇರಿಸಿದರು. ಡಾ. ನರೇಂದ್ರ ಕುಮಾರ್ ಮಾತನಾಡಿ ಗೃಹ ಆರೋಗ್ಯ ಸೇವೆಗಳ ಮಹತ್ವವನ್ನು ತಿಳಿಸಿ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಡಾ.ವೀಣಾ ನರೇಂದ್ರ ಗೃಹ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಆಸ್ಪತ್ರೆಯ ವ್ಯವಸ್ಥಾಪಕಿ ಶೋಭಾ ಯು ಆಚಾರ್ಯ ನಿರೂಪಿಸಿದರು.
ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.