ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರಾವಣ ಪುರುಷೋತ್ತಮ ಅಧಿಕ ಮಾಸ ಕಲಿ ಸಂತರಣೋಪನಿಷತ್ ಮಂತ್ರ ಜಪಾರಾಧನೆ ಹಾಗೂ ಕಲಿ ಸಂತರಣೋಪನಿಷತ್ ಹವನವು ಜು.24 ರಿಂದ ಆರಂಭಗೊಂಡು ಆ.15 ತನಕ ನಡೆಯಿತು.
ಇಂದು ಬೆಳ್ಳಿಗೆ ನಡೆದ ಸಾಮೂಹಿಕ ಪ್ರಾರ್ಥನೆ, ಕಲಿ ಸಂತರಣೋಪನಿಷತ್ ಹವನದ ಧಾರ್ಮಿಕ ಪೂಜಾವಿಧಾನಗನ್ನು ಚೇಂಪಿ ಶ್ರೀಕಾಂತ್ ಭಟ್ ನೆರವೇರಿಸಿದರು. ಯಾಗ ಶಾಲೆಯಲ್ಲಿ ಹವನ, ಪೂರ್ಣಾಹುತಿ ಹಾಗೂ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಊರ ಪರವೂರ ಭಜನಾ ಮಂಡಳಿಗಳಿಂದ ಒಂದು ತಿಂಗಳ ಕಾಲ ಅಹೋರಾತ್ರಿ ಭಜನಾ ಮಹೋತ್ಸವ ನಡೆಯಿತು. ಶ್ರೀ ದೇವರಿಗೆ ವಿಶೇಷ ಅಲಂಕಾರ ಹಾಗೂ ವಿಶೇಷ ಆಹ್ವಾನಿತ ಪಸಿದ್ಧ ಕಲಾವಿದರಿಂದ ಭಕ್ತಿ ಸಂಗೀತ ಸೇವೆ ಜರಗಿತು.
ದೇವಳದ ಆಡಳಿತ ಮೊಕ್ತೇಸರ ಪಿ.ವಿ ಶೆಣೈ, ಉಮೇಶ್ ಪೈ, ಮಟ್ಟಾರ್ ವಸಂತ ಕಿಣಿ , ವಿಶ್ವನಾಥ ಭಟ್, ಪ್ರಕಾಶ್ ಶೆಣೈ, ಅಶೋಕ ಬಾಳಿಗಾ, ಗಣೇಶ ಕಿಣಿ , ರೋಹಿತಾಕ್ಷ ಪಡಿಯಾರ್ ಪುಂಡಲೀಕ್ ಕಾಮತ್ ,ಪ್ರಕಾಶ್ ಭಕ್ತ, ನಾರಾಯಣ ಪ್ರಭು, ಅರ್ಚಕರಾದ ವಿನಾಯಕ ಭಟ್ , ದಯಾಘನ್ ಭಟ್ , ದೀಪಕ್ ಭಟ್, ನಾರಾಯಣ ಭಟ್, ಗಿರೀಶ ಭಟ್, ಯುವಕ ಮಂಡಲದ ಅಧ್ಯಕ್ಷ ನಿತೇಶ ಶೆಣೈ , ಸತೀಶ್ ಕಿಣಿ , ವಿಶಾಲ್ ಶೆಣೈ , ಭಾಸ್ಕರ್ ಶೆಣೈ , ಭಜನಾ ಸಪ್ತಾಹ ಸಮಿತಿಯ ಸದಸ್ಯರು, ಜಿ ಎಸ್ ಬಿ ಯುವಕ ಮತ್ತು ಮಹಿಳಾ ಮಂಡಳಿ ಸದಸ್ಯರು ಹಾಗೂ ಸಾವಿರಾರು ಸಮಾಜ ಭಾಂದವರು ಉಪಸ್ಥಿತರಿದ್ದರು.