ಚಂದ್ರಯಾನ-3 ರ ಚಿತ್ರ ರಚಿಸಿ ಸ್ವಾತಂತ್ರ್ಯ ದಿನವನ್ನು ವಿಶಿಷ್ಟವಾಗಿಸಿದ ನ್ಯೂ ಫ್ರೆಂಡ್ಸ್ ಕಬ್ಬೆಟ್ಟು

ಉಡುಪಿ: ಅಂಬಲಪಾಡಿಯ ನ್ಯೂ ಫ್ರೆಂಡ್ಸ್ ಕಬ್ಬೆಟ್ಟು ಇವರು ಪ್ರತೀ ಬಾರಿಯಂತೆ ಈ ಬಾರಿಯೂ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಈ ಬಾರಿ 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಚಂದ್ರಯಾನ- 3 ರ ಚಿತ್ರ ರಚಿಸಿ ಜನಮನ್ನಣೆ ಗಳಿಸಿದ್ದಾರೆ.

ಕಲಾರಚನೆಯಲ್ಲಿ ಸುಧಾಕರ್, ದಯಾನಂದ, ಹರೀಶ್ ಸಹಕರಿಸಿದ್ದಾರೆ.