ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಎನ್.ಸಿ.ಸಿ ಆರ್ಮಿ ಕೆಡೆಟ್ ಜೆ.ಯು.ಒ (ವಿದ್ಯಾರ್ಥಿ) ಭರತ್ ಬಾಬು ದೇವಾಡಿಗ ಅವರು ಎನ್.ಸಿ.ಸಿ ವಿಶೇಷ ಪ್ರವೇಶದಲ್ಲಿ ಅಖಿಲ ಭಾರತ ರ್ಯಾಂಕಿಂಗ್ ನಲ್ಲಿ 15ನೇ ರ್ಯಾಂಕ್ ಗಳಿಸಿದ್ದಾರೆ. ಇವರು ಕೇಂದ್ರದ ಸಿಬ್ಬಂದಿ ಆಯ್ಕೆ ಮಂಡಳಿ ( ಎಸ್.ಎಸ್.ಸಿ)ಯ 21ಎಸ್.ಎಸ್.ಬಿ ಭೂಪಾಲ್ ನಿಂದ ಇವರನ್ನು ಶಿಫಾರಸು ಮಾಡಲಾಗಿದೆ. ಇವರು ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಿ.ಶುಭಕರಾಚಾರಿ, ಎನ್.ಸಿ.ಸಿ ಸೇನಾ ಅಧಿಕಾರಿ ಅಂಜನ್ ಕುಮಾರ್ ,ಭೋದಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನಂದಿಸಿದ್ದಾರೆ ತಯ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.