ಮಂದಾರ್ತಿ: ನಮಸ್ತೆ ಭಾರತ್ ಟ್ರಸ್ಟ್ (ರಿ) ಮಂದಾರ್ತಿ ಇವರ ಸಂಯೋಜನೆಯಲ್ಲಿ ಆ.13 ರಂದು ಮಧ್ಯಾಹ್ನ 3 ಗಂಟೆಗೆ ಮಂದಾರ್ತಿ ಶ್ರೀ ದುರ್ಗಾ ಸನ್ನಿಧಿ ಶೇಡಿಕೂಡ್ಲುವಿನಲ್ಲಿ ಸದಾವತ್ಸಲೇ ಜನ-ಗಣ-ಮನ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮದ ಅಂಗವಾಗಿ ಪ್ಲಾಸ್ಟಿಕ್ ಜಾಗೃತಿ, ಪ್ರತಿಭಾ ಪುರಸ್ಕಾರ, ಕಿರುಚಿತ್ರ ಪ್ರದರ್ಶನ, ಕುಣಿತ ಭಜನೆ, ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ಹಮ್ಮಿಕೊಳ್ಳಲಾಗಿದೆ.
ವೃತ್ತಿಪರ ಕೃಷಿಕ ಹೆಚ್. ವಿಠಲ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ, ಮಂದಾರ್ತಿ ದೇವಳದ ಆನುವಂಶಿಕ ಮೊಕ್ತೇಸರ ಹೆಚ್.ಧನಂಜಯ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಗಣೇಶ್ ಕಿಣಿ, ಕೆ.ಎಂ ಉಡಪ ಟ್ರಸ್ಟ್ ನ ಕೆ.ಮಹೇಶ್ ಉಡುಪ ಹಾಗೂ ಸಮಾಜ ಸೇವಕಿ ಜ್ಯೋತಿ ಉದಯ್ ಪೂಜಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.