ಎಂಐಟಿ ಕಾಲೇಜಿನಲ್ಲಿ ಎನ್ ಸಿ ಸಿ ವಿದ್ಯಾರ್ಥಿಗಳಿಗಾಗಿ ರೋಯಿಂಗ್ ಸಿಮ್ಯುಲೇಟರ್ ಅನಾವರಣ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಘಟಕವಾದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ, ಎನ್ ಸಿ ಸಿ ವಿದ್ಯಾರ್ಥಿಗಳ ರೋಯಿಂಗ್ ಮತ್ತು ದೈಹಿಕ ತರಬೇತಿಯನ್ನು ಸುಧಾರಿಸಲು ಮತ್ತು ಹೊಸತನವನ್ನು ಉತ್ತೇಜಿಸಲು ಮೊತ್ತ ಮೊದಲ ಬಾರಿಗೆ ರೋಯಿಂಗ್ ಸಿಮ್ಯುಲೇಟರ್ ಅನ್ನು ಅನಾವರಣಗೊಳಿಸಲಾಯಿತು.

ಸಮಾರಂಭದಲ್ಲಿ ಮಾಹೆ ಉಪಕುಲಪತಿ, ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ ವೆಂಕಟೇಶ್, ಹಾಗೂ ಎಂಐಟಿ ಮತ್ತು ಮಾಹೆಯ ಇತರ ಗಣ್ಯರು ಉಪಸ್ಥಿತರಿದ್ದರು.

ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ ವೆಂಕಟೇಶ್ ಮಾತನಾಡಿ, ಇಂತಹ ಹಲವು ವಿನೂತನ ಅಲೋಚನೆ ಹಾಗೂ ಯೋಜನೆಗಳ ಅನುಷ್ಠಾನಕ್ಕಾಗಿ ಎಂಐಟಿಯ ಅಚಲ ಬದ್ಧತೆ, ಪರಿಶ್ರಮ ಹಾಗೂ ಕೊಡುಗೆಯನ್ನು ಶ್ಲಾಘಸಿದರು. ರೋಯಿಂಗ್ ಸಿಮ್ಯುಲೇಟರ್, ಎಂಐಟಿಯ ದೂರದರ್ಶಿತ್ವವನ್ನು ಉದಾಹರಿಸುತ್ತದೆ. ಇಂತಹ ಸೌಲಭ್ಯದ ಸಂಪೂರ್ಣ ಉಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂಐಟಿ ನಿರ್ದೇಶಕ Cdr (ಡಾ.) ರಾಣಾ, ಹೊಸದಿಲ್ಲಿಯ ಎನ್ ಸಿ ಸಿಯ ಮಹಾನಿರ್ದೇಶಕರ ಅನುದಾನದಲ್ಲಿ ಹೊಸದಾಗಿ ಸ್ಥಾಪಿಸಲಾದ ರೋಯಿಂಗ್ ಸಿಮ್ಯುಲೇಟರ್  ಉಡುಪಿಯಲ್ಲಿರುವ 6ನೇ ಕರ್ನಾಟಕ ನೇವಲ್ ಎನ್‌ಸಿಸಿ ಘಟಕದೊಂದಿಗೆ ಸಂಯೋಜಿತವಾಗಿರುವ ಎಂಐಟಿ ಯ ಎನ್ ಸಿ ಸಿ ನೇವಲ್ ಉಪಘಟಕವನ್ನು ಒಳಗೊಂಡಂತೆ ಎನ್ ಸಿ ಸಿ (ನ್ಯಾಷನಲ್ ಕೆಡೆಟ್
ಕಾರ್ಪ್ಸ್) ನೊಂದಿಗೆ ಸಂಯೋಜಿತವಾಗಿರುವ ನೌಕಾ ಕೆಡೆಟ್‌ಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡುವುದರೊಂದಿಗೆ, ಸಿಮ್ಯುಲೇಟರ್ ವಿವಿಧ ಪ್ರಾದೇಶಿಕ ಸಂಸ್ಥೆಗಳು ಮತ್ತು ಶಾಲೆಗಳ ಕೆಡೆಟ್‌ಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇಂತಹ ನವೀನ ಉಪಕ್ರಮಗಳ ಮುಂಚೂಣಿಯಲ್ಲಿದೆ ಮತ್ತು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಅತ್ಯಾಧುನಿಕ ಸಂಪನ್ಮೂಲಗಳಿಗೆ ಪ್ರವೇಶವನ್ನು ಒದಗಿಸಿದ್ದಕ್ಕಾಗಿ ಅವರು ಮಾಹೆ ಸಂಸ್ಥೆಗೆ ಧನ್ಯವಾದ ಅರ್ಪಿಸಿದರು.