ಮುಂದಿನ ಮೂರು ತಿಂಗಳಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯ ಪೂರ್ಣ: ಯೋಗಿ ಆದಿತ್ಯನಾಥ್

ಅಯೋಧ್ಯಾ: ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರದ ಕಾರ್ಯಗಳು ಭರದಿಂದ ಸಾಗುತ್ತಿವೆ. ಮುಂದಿನ ವರ್ಷ ಜನವರಿ ವೇಳಿಗೆ ಮಂದಿರ ಕಾರ್ಯ ಪೂರ್ಣವಾಗುವ ನಿರೀಕ್ಷೆಗಳಿವೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಸ್ತುತ ಉತ್ತರ ಪ್ರದೇಶದಲ್ಲಿ 9 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. 12 ವಿಮಾನ ನಿಲ್ದಾಣಗಳ ಕಾರ್ಯ ನಡೆಯುತ್ತಿದೆ. ಇದರಲ್ಲಿ ಎರಡು ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಸೇರಿವೆ. ಇದರಲ್ಲಿ ಒಂದು ಅಯೋಧ್ಯೆಯಲ್ಲಿದ್ದು ಮುಂದಿನ ಮೂರು ತಿಂಗಳಲ್ಲಿ ಅದರ ಕಾರ್ಯ ಸಂಪೂರ್ಣವಾಗಲಿದೆ ಎಂದರು.

ನಿಲ್ದಾಣದ ಸುರಕ್ಷೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ನಿಲ್ದಾಣವು ಸಂಪೂರ್ಣವಾಗಿ ಕಾರ್ಯಾಚರಣೆ ಮಾಡಲಿದೆ ಎಂದರು.

ಗೌತಮ ಬುದ್ದ ನಗರದಲ್ಲಿ ಏಷ್ಯಾದ ಅತಿದೊಡ್ಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯ ಕೂಡಾ ನಡೆಯಲಿದೆ. ಇದರ ಮೊದಲ ರನ್ ವೇ ಈ ವರ್ಷಾಂತ್ಯದೊಳಗೆ ಕಾರ್ಯಾಚರಣೆ ಮಾಡಲಿದೆ. ಉತ್ತರ ಪ್ರದೇಶವನ್ನು ರಫ್ತಿನಲ್ಲಿ ಮುಂಚೂಣಿಯಾಗಿಸುವ ನಿಟ್ಟಿನಲ್ಲಿ ಕಾರ್ಗೋ ಸೇವೆಗಳನ್ನೂ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.