ಗೃಹರಕ್ಷಕ ಚೂಡಪ್ಪ ಸುವರ್ಣ ಕುಟುಂಬಕ್ಕೆ ಸಹಾಯಧನ

ಉಡುಪಿ: ಅನಾರೋಗ್ಯದಿಂದ ಮೃತಪಟ್ಟ ಜಿಲ್ಲಾ ಗೃಹರಕ್ಷಕ ದಳ ಬ್ರಹ್ಮಾವರ ಘಟಕದ ಗೃಹರಕ್ಷಕ ಚೂಡಪ್ಪ ಸುವರ್ಣ ಅವರ ಕುಟುಂಬಕ್ಕೆ ಜಿಲ್ಲಾ ಸಮಾದೇಷ್ಟ ಪ್ರಶಾಂತ್ ಶೆಟ್ಟಿ ಅವರು ಜಿಲ್ಲಾ ಗೃಹರಕ್ಷಕ ನಿಧಿಯಿಂದ 10,000 ರೂ. ಗಳ ಸಹಾಯಧನದ ಚೆಕ್ ಅನ್ನು ನೀಡಿದರು.

ಈ ಸಂದರ್ಭದಲ್ಲಿ ಉಪಸಮಾದೇಷ್ಟ ರಮೇಶ್, ಬ್ರಹ್ಮಾವರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್, ಕಚೇರಿ ಅಧೀಕ್ಷಕ ರತ್ನಾಕರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.