ಸಿಡ್ನಿ (ಆಸ್ಟ್ರೇಲಿಯಾ):ಪ್ರಸಕ್ತ ವರ್ಷದ ಬಿಡ್ಲ್ಯೂಎಫ್ನ ವರ್ಲ್ಡ್ ಟೂರ್ನಲ್ಲಿ ಉತ್ತಮ ಲಯದಲ್ಲಿರುವ ಭಾರತೀಯ ಆಟಗಾರ ಶ್ರೇಯಾಂಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದರು. ಆದರೆ ಫೈನಲ್ನಲ್ಲಿ ಚೀನಾದ 34ನೇ ಶ್ರೇಯಾಂಕಿತ ಆಟಗಾರನೆದುರು 21-9, 23-21 ಮತ್ತು 21-12 ರ ಸೆಟ್‌ಗಳಿಂದ ಪರಾಭವಗೊಂಡರು.
ಪ್ರಸಕ್ತ ವರ್ಷದ ಬಿಡ್ಲ್ಯೂಎಫ್ನ ವರ್ಲ್ಡ್ ಟೂರ್ನಲ್ಲಿ ಉತ್ತಮ ಲಯದಲ್ಲಿರುವ ಭಾರತೀಯ ಆಟಗಾರ ಶ್ರೇಯಾಂಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದರು. ಆದರೆ ಫೈನಲ್ನಲ್ಲಿ ಚೀನಾದ 34ನೇ ಶ್ರೇಯಾಂಕಿತ ಆಟಗಾರನೆದುರು 21-9, 23-21 ಮತ್ತು 21-12 ರ ಸೆಟ್‌ಗಳಿಂದ ಪರಾಭವಗೊಂಡರು.ಮೊದಲ ಸೆಟ್ನಲ್ಲಿ ಪ್ರಣಯ್ ವೆಂಗ್ ಹಾಂಗ್ಯಾಂಗ್ ವಿರುದ್ಧ ಅಂಕಕ್ಕಾಗಿ ಪರದಾಡಿದರು. ವೆಂಗ್ ತಮ್ಮ ಚುರುಕಿನ ನಡೆ ಮತ್ತು ಅದ್ಭುತ ಶಾಟ್ಗಳಿಂದ ಮೊದಲ ಸೆಟ್ನಲ್ಲಿ ಮುನ್ನಡೆ ಸಾಧಿಸಿದರು. ಪ್ರಣಯ್ 9 ಅಂಕ ಪಡೆಯುವಷ್ಟರಲ್ಲಿ ವೆಂಗ್ 21 ಅಂಕಗಳಿಂದ ಸೆಟ್ ಗೆದ್ದರು.
ಭಾರತದ ಷಟ್ಲರ್ ಎಚ್.ಎಸ್.ಪ್ರಣಯ್ ಅವರು ಆಸ್ಟ್ರೇಲಿಯಾ ಓಪನ್ ಫೈನಲ್ಸ್ನಲ್ಲಿ ಚೀನಾ ಆಟಗಾರ ವೆಂಗ್ ಹಾಂಗ್ಯಾಂಗ್ ವಿರುದ್ಧ ಕಠಿಣ ಸ್ಪರ್ಧೆ ನೀಡಿ ಸೋಲು ಕಂಡರು.ವಿಶ್ವ ಬ್ಯಾಡ್ಮಿಂಟನ್ 9ನೇ ಶ್ರೇಯಾಂಕಿತ ಆಟಗಾರ ಎಚ್.ಎಸ್.ಪ್ರಣಯ್ ಅವರು ಆಸ್ಟ್ರೇಲಿಯಾ ಓಪನ್ನಲ್ಲಿ ಚೀನಿ ಆಟಗಾರನ ವಿರುದ್ಧ ಸೋಲುಂಡರು.
ಎರಡನೇ ಸೆಟ್ನಲ್ಲಿ ಪ್ರಣಯ್ ತಪ್ಪುಗಳನ್ನು ತಿದ್ದಿಕೊಂಡು ವೆಂಗ್ಗೆ ಫೈಟ್ ಕೊಟ್ಟರು. ಎರಡನೇ ಸೆಟ್ನಲ್ಲಿ ತೀವ್ರ ಪೈಪೋಟಿಯಿಂದಾಗಿ ಪಂದ್ಯ ರೋಚಕ ದಿಕ್ಕಿನತ್ತ ಸಾಗಿ ಫಲಿತಾಂಶಕ್ಕಾಗಿ ಮೂರನೇ ಸೆಟ್ ಆಡಿಸುವ ಅವಶ್ಯಕತೆ ಉದ್ಭವಿಸಿತು. ಪ್ರಣಯ್ ಈ ಬಾರಿ ಸುಲಭವಾಗಿ ಅಂಕಗಳನ್ನು ನೀಡಲಿಲ್ಲ. ಅವರು 19-17 ರ ಮುನ್ನಡೆ ಸಾಧಿಸಿದರು. ಈ ವೇಳೆ ವೆಂಗ್ 20-20ರ ಸಮಬಲ ಸಾಧಿಸಿದರು. ಇದರಿಂದ 23 ಗೆಲುವಿನ ಅಂಕವಾಯಿತು. ವೆಂಗ್ 21ನೇ ಅಂಕ ಪಡೆದಾಗ ಪ್ರಣಯ್ 23 ಅಂಕ ಪಡೆದು ಎರಡನೇ ಸೆಟ್ ತಮ್ಮದಾಗಿಸಿಕೊಂಡರು.
43 ನಿಮಿಷಗಳ ಕಾದಾಟದಲ್ಲಿ ಪ್ರಣಯ್ ಈ ವರ್ಷದ ಎರಡನೇ ಫೈನಲ್ ಪ್ರವೇಶಿಸಿದ್ದರು.
ಮೂರನೇ ಸೆಟ್ನಲ್ಲಿ ಇಬ್ಬರೂ ಇನ್ನಷ್ಟು ಬಲಿಷ್ಠ ಹೋರಾಟ ತೋರಿಸಿದರು. ಆರಂಭಿಕ ಹಂತದಲ್ಲಿ ಸಮಬಲದ ಅಂಕದಿಂದಲೇ ಮುಂದೆ ಸಾಗಿದ ಆಟಗಾರರು ಪ್ರತಿ ಕ್ಷಣದಲ್ಲೂ ಪಂದ್ಯವನ್ನು ಬಿಗಿಗೊಳಿಸುತ್ತಲೇ ಸಾಗಿದರು. ಕೊನೆಯಲ್ಲಿ ಪ್ರಣಯ್ 18 ಅಂಕ ಪಡೆದಿದ್ದಾಗ ಮಾಡಿದ ಸಣ್ಣ ತಪ್ಪುಗಳ ಲಾಭ ಪಡೆದುಕೊಂಡ ವೆಂಗ್ 21 ಅಂಕಗಳಿಂದ 3ನೇ ಸೆಟ್ ವಶಪಡಿಸಿಕೊಂಡು ಆಸ್ಟ್ರೇಲಿಯಾ ಓಪನ್ ಗೆದ್ದು ಬೀಗಿದರು.
ಸೆಮಿಫೈನಲ್ನಲ್ಲಿ ಪ್ರಣಯ್ ಇನ್ನೊಬ್ಬ ದೇಶಿ ಆಟಗಾರ ಪ್ರಿಯಾಂಶು ರಾಜಾವತ್ ಅವರನ್ನು 21-18, 21-12 ರಿಂದ ಮಣಿಸಿ ಫೈನಲ್ಗೇರಿದ್ದರು.