ಬೆಂಗಳೂರು: ಕೆಲವು ವೈಯಕ್ತಿಕ ಖಾತೆಗಳನ್ನು ರದ್ದುಪಡಿಸಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯ ಕ್ರಮ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿ 50 ಲಕ್ಷ ರೂ.ಗಳ ದಂಡ ವಿಧಿಸಿ ಆದೇಶಿಸಿದ್ದ ಏಕ ಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಟ್ವಿಟ್ಟರ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.
ವೈಯಕ್ತಿಕ ಖಾತೆಗಳ ರದ್ದು ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ್ದ ಏಕ ಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಟ್ವಿಟ್ಟರ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.
ಮೇಲ್ಮನವಿ ಅರ್ಜಿಯಲ್ಲಿ ಏಕ ಸದಸ್ಯ ಪೀಠ 50 ಲಕ್ಷ ದಂಡ ವಿಧಿಸಿರುವುದು ಅತಿ ಹೆಚ್ಚಿನ ಪ್ರಮಾಣದ ದಂಡವಾಗಿದೆ. ಅಲ್ಲದೆ, ಇದೂ ನಿಯಮಭಾಗಿರವಾಗಿದ್ದೂ ಈ ಆದೇಶ ರದ್ದುಪಡಿಸಬೇಕು ಎಂದು ಮಧ್ಯಂತ ಮನವಿ ಮಾಡಿದೆ.ಟ್ಟಟ್ಟರ್ (ಪ್ರಸ್ತುತ ಎಕ್ಸ್ ಕಾರ್ಪ್) ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಭಾಗೀಯ ಪೀಠದ ಮುಂದೆ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಪ್ರಕರಣ ಸಂಬಂಧ 8 ಪ್ರಶ್ನೆಗಳನ್ನು ರೂಪಿಸಿತ್ತು. ಅದರಲ್ಲಿ ವಿದೇಶಿ ಕಂಪನಿ ದೇಶದಲ್ಲಿ ಅರ್ಜಿ ಸಲ್ಲಿಸಬಹುದೇ ಎಂಬ ಅಂಶವನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಶ್ನೆಗಳು ಟ್ವಿಟ್ಟರ್ಗೆ ವಿರುದ್ಧವಾಗಿವೆ ಎಂದು ತಿಳಿಸಿ ಅರ್ಜಿಯನ್ನು ತಿರಸ್ಕರಿಸಿತ್ತು. ಅಲ್ಲದೆ, ಸುಮಾರು ಒಂದು ವರ್ಷದ ಕಾಲ ಕೇಂದ್ರ ಸರ್ಕಾರದ ಆದೇಶಗಳನ್ನು ಪಾಲಿಸದ ಟ್ವಿಟ್ಟರ್ ಆ ನಂತರ ಹೈಕೋರ್ಟ್ ಮೆಟ್ಟಿಲೇರಿದೆ ಎಂದು ತಿಳಿಸಿದ್ದ ನ್ಯಾಯಪೀಠ, 50 ಲಕ್ಷ ರೂ. ದಂಡ ವಿಧಿಸಿತ್ತು. ಅಷ್ಟೇ ಅಲ್ಲದೆ, ಆಗಸ್ಟ್ 14ರೊಳಗಾಗಿ ದಂಡವನ್ನು ಪಾವತಿ ಮಾಡಬೇಕು. ಇಲ್ಲವಾದಲ್ಲಿ ಪ್ರತಿ ದಿನಕ್ಕೆ 5 ಸಾವಿರ ರೂ.ಗಳ ಹೆಚ್ಚುವರಿ ದಂಡವನ್ನು ಪಾವತಿ ಮಾಡಬೇಕು ಎಂದು ಆದೇಶಿಸಿತ್ತು. ಇದೀಗ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಟ್ವಿಟ್ಟರ್ ಹೈಕೋರ್ಟ್ನ ದ್ವಿಸದಸ್ಯ ಪೀಠದ ಮೊರೆ ಹೋಗಿದೆ.
ಖಾತೆದಾರರಿಗೆ ಯಾವುದೇ ರೀತಿಯ ನೋಟಸ್ ನೀಡಿದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 69 ಅಡಿಯಲ್ಲಿ ಕೆಂದ್ರ ಸರ್ಕಾರ ಕೆಲವು ಖಾತೆಗಳನ್ನು ರದ್ದುಪಡಿಸಿದೆ ಎಂದು ಟ್ವಿಟ್ಟರ್ ಆರೋಪಿಸಿತ್ತು. ಅಲ್ಲದೆ, 2021ರ ಫೆಬ್ರವರಿ 2 ರಿಂದ 2022ರ ಪೆಭ್ರವರಿ 28ರ ಅವಧಿಯಲ್ಲಿ ಕೇಂದ್ರ ಸರ್ಕಾರ 1474 ವೈಯಕ್ತಿಕ ಖಾತೆಗಳು ಮತ್ತು 175 ಟ್ವಿಟ್ಗಳು ಹಾಗೂ 256 ಯೂಆರ್ಎಲ್ಗಳು ಹಾಗೂ ಒಂದು ಹ್ಯಾಶ್ ಟ್ಯಾಗ್ಗೆ ನಿರ್ಬಂಧ ವಿಧಿಸಿತ್ತು. ಆದರೆ, 29 ಯುಆರ್ಎಲ್ಗಳನ್ನು ರದ್ದು ಪಡಿಸಿದ್ದ ಕ್ರಮ ಪ್ರಶ್ನಿಸಲಾಗಿತ್ತು.