ಮಂಗಳೂರು: ಇತಿಹಾಸ ಪ್ರಸಿದ್ಧ ಮೂಡಬಿದಿರೆಯ ಸಾವಿರ ಕಂಬದ ಜೈನಬಸದಿಯಲ್ಲಿ ಕಳ್ಳತನನಡೆದಿದ್ದು, ಬಸದಿಯ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆಸಿದ್ದಾರೆ.
ಮೂಡಬಿದ್ರೆ ಪೇಟೆಯಲ್ಲಿರುವ ಸಾವಿರ ಕಂಬದ ಜೈನ ಬಸದಿಯ ಮುಂಭಾಗದ ಬಾಗಿಲು ಒಡೆದು ಕಳ್ಳರು ಒಳನುಗ್ಗಿದ್ದಾರೆ.
ಈ ಬಗ್ಗೆ ತನಿಖೆಗೆ ಮೂಡಬಿದ್ರೆ ಜೈನ ಸ್ವಾಮೀಜಿ ಭಟ್ಟಾರಕ ಶ್ರೀ ಆಗ್ರಹಿಸಿದ್ದು, ಸ್ಥಳಕ್ಕೆ ಡಿಸಿಪಿ ಲಕ್ಷ್ಮಿಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.