ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಪ್ರೇಕ್ಷಕರ ಜೊತೆ ಕುಳಿತು ವೀಕ್ಷಿಸಿದ ಡಾಲಿ ಧನಂಜಯ್

ಕೌಸಲ್ಯ ಸುಪ್ರಜಾ ರಾಮ, ಆಚಾರ್ & ಕೋ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿವೆ. ಈ ಸಾಲಿನಲ್ಲಿ ಯುವ ಪ್ರತಿಭೆಗಳ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಕೂಡ ಸೇರಿದೆ. ಇನ್ನು ಸಿನಿ ಪ್ರಿಯರ ಮೆಚ್ಚುಗೆ ಪಡೆಯುವ ಮೂಲಕ ಯಶಸ್ವಿ ಮೂರನೇ ವಾರದತ್ತ ಮುನ್ನುಗ್ಗುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಸಿನಿಮಾಗಳು ಇಲ್ಲದೆ ಹೊಸ ಪ್ರತಿಭೆಗಳ ಫ್ರೆಶ್ ಕಂಟೆಂಟ್ ಇರುವ ಚಿತ್ರಗಳು ಸಿನಿಮಾ ಪ್ರೇಕ್ಷಕರನ್ನು ಹಿಡಿದಿಡುತ್ತವೆ.ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಬದುಕು ಬಹಳ ಸಿಂಪಲ್ ಅನ್ನೋದನ್ನ ತೋರಿಸಲಾಗಿದೆ ಎಂದು ಡಾಲಿ ಧನಂಜಯ್ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನಟರಾದ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ವಿಜಯ ರಾಘವೇಂದ್ರ, ನೆನಪಿರಲಿ ಪ್ರೇಮ್, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ವಿಕ್ರಮ್ ರವಿಚಂದ್ರನ್, ನಿರ್ದೇಶಕರಾದ ಅನೂಪ್ ಭಂಡಾರಿ, ಸಂಚಿತ್ ಸಂಜೀವ್, ಪ್ರಮೋದ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಡಾರ್ಲಿಂಗ್ ಕೃಷ್ಣ, ನಟಿಯರಾದ ಮಿಲನ ನಾಗರಾಜ್, ಸಂಗೀತ ಶೃಂಗೇರಿ, ಸಂಯುಕ್ತಾ ಹೊರನಾಡ್, ಚೈತ್ರಾ ಆಚಾರ್, ಸೇರಿದಂತೆ ಬಹುತೇಕ ಕನ್ನಡ ಚಿತ್ರರಂಗದ ತಾರೆಯರು, ನಿರ್ದೇಶಕರು, ನಿರ್ಮಾಪಕರು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನ ನೋಡಿ ಮೆಚ್ಚಿಕೊಂಡರು. ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ.

ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮ್ಸ್ ಬ್ಯಾನರ್ ಅಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ. ಕಶ್ಯಪ್ ಬಂಡವಾಳ ಹೂಡಿದ್ದಾರೆ.

ಇದೀಗ ಡಾಲಿ ಧನಂಜಯ್ ಸಾಮಾನ್ಯ ಪ್ರೇಕ್ಷಕನಾಗಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನ ನೋಡಿ ಮೆಚ್ಚಿಕೊಂಡಿದ್ದಾರೆ. ನೂರಾರು ಅಭಿಮಾನಿಗಳ ಜೊತೆ ಬೆಂಗಳೂರಿನ ಮಾಲ್​ವೊಂದರಲ್ಲಿ ಧನಂಜಯ್ ಈ ಚಿತ್ರದ ಪ್ರತಿಯೊಂದು ಸನ್ನಿವೇಶಗಳನ್ನ ನೋಡಿ ಎಂಜಾಯ್ ಮಾಡಿದ್ದಾರೆ. ಚಿತ್ರದ ಕಲಾವಿದರಿಂದ ಹಿಡಿದು, ನಿರ್ದೇಶಕರು, ತಂತ್ರಜ್ಞಾನರು, ಹಾಸ್ಟೆಲ್ ಹುಡುಗರ ಬಗ್ಗೆ ಏನು ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ.

ಎಲ್ಲವು ಬಹಳ ಚೆನ್ನಾಗಿದೆ. ಹಾಸ್ಟೆಲ್ ಹುಡುಗರು ಸಿನಿಮಾದಲ್ಲಿ ಬದುಕು ಬಹಳ ಸಿಂಪಲ್ ಅನ್ನೋದನ್ನ ತೋರಿಸಲಾಗಿದೆ. ಈ ಸಿನಿಮಾ ನೋಡುಗರನ್ನ ನಗುಸುತ್ತೆ. ಪ್ರತಿಯೊಬ್ಬ ಹಾಸ್ಟೆಲ್ ಹುಡುಗರ ಜೀವನವನ್ನ ನೆನಪಿಸುತ್ತೆ ಅಂತಾ ಡಾಲಿ ಈ ಹೊಸ ಪ್ರತಿಭೆಗಳ ಚಿತ್ರವನ್ನ ನೋಡಿ ಎಂಜಾಯ್​ ಮಾಡಿದ್ರು.

ಸದ್ಯ ಸಿನಿಮಾ ಪ್ರೇಕ್ಷಕರು ಅಲ್ಲದೇ ಸಿನಿಮಾ ಸೆಲೆಬ್ರಿಟಿಗಳು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರವನ್ನ ನೋಡಿ ಮೆಚ್ಚಿಕೊಳ್ಳುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗುತ್ತಿದೆ