ಕಾರ್ಕಳ : ಗಣಿತನಗರದಲ್ಲಿರುವ ಜ್ಞಾನಸುಧಾ ಪ.ಪೂ. ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು
ಭಾರತೀಯ ತಂತ್ರಜ್ಞಾನ ಸಂಸ್ಥೆ(ಐ.ಐ.ಟಿ)ಗೆ ಆಯ್ಕೆಯಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐ.ಐ.ಟಿ) ಪ್ರವೇಶಕ್ಕೆ ನಡೆದಿದ್ದ ಜೆ.ಇ.ಇ ಅಡ್ವಾನ್ಸ್ಡ್ ಫಲಿತಾಂಶದಲ್ಲಿ ವಿದ್ಯಾರ್ಥಿಗಳಾದ ಧನ್ವಿತ್ ನಾಯಕ್ ಆಲ್ ಇಂಡಿಯಾ (ಜನರಲ್ ಮೆರಿಟ್) 3918ನೇ ರ್ಯಾಂಕ್ ಮತ್ತು ಸಮೃದ್ಧ್ ನೆಲ್ಲಿ ಆಲ್ ಇಂಡಿಯಾ (ಜನರಲ್ಮೆರಿಟ್) 5769ನೇ ರ್ಯಾಂಕ್ ಪಡೆದು ಪ್ರತಿಷ್ಠಿತ ಐ.ಐ.ಟಿ ಖರಗ್ಪುರ ಇಂಜಿನಿಯರಿಂಗ್ ವಿಭಾಗಕ್ಕೆ ಪ್ರವೇಶಿಸಿದ್ದಾರೆ.
ಕೆ.ಸಿ.ಇ.ಟಿ. ಇಂಜಿನಿಯರಿಂಗ್ನಲ್ಲಿಯೂ ಧನ್ವಿತ್ ನಾಯಕ್ 87ನೇ ರ್ಯಾಂಕ್, ಸಮೃದ್ಧ್ ನೆಲ್ಲಿ 349ನೇ ರ್ಯಾಂಕ್ ಗಳಿಸಿದ್ದರು. ಈಗಾಗಲೇ ಜ್ಞಾನಸುಧಾಗೆ ಜೆ.ಇ.ಇ ಅಡ್ವಾನ್ಸ್ಡ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಹತ್ತು ಸಾವಿರದೊಳಗೆ 10 ರ್ಯಾಂಕ್, ನೀಟ್ ಪರೀಕ್ಷೆಯಲ್ಲಿ 93 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕವನ್ನು, ಕೆ.ಸಿ.ಇ.ಟಿಯಲ್ಲಿ 105 ವಿದ್ಯಾರ್ಥಿಗಳು 5000 ಸಾವಿರದೊಳಗಿನ ರ್ಯಾಂಕ್ ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಸಾಧಕ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿದ್ದು, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದಾರೆ.