ಮಂಜೇಶ್ವರ: ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರದಲ್ಲಿ ಸ್ನೇಹಾಲಯ ಫ್ಯಾಷನ್ ಫೆಸ್ಟ್

ಮಂಜೇಶ್ವರ: ಜು. 29 ರಂದು ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರದದಲ್ಲಿರುವವರಿಗಾಗಿ ‘ಸ್ನೇಹಾಲಯ ಫ್ಯಾಷನ್ ಫೆಸ್ಟ್’ ಅನ್ನು ಆಯೋಜಿಸಲಾಯಿತು. ಮಾನಸಿಕ ಅಸ್ವಸ್ಥರಿಗೆ ನಡೆದ ಈ ಫ್ಯಾಷನ್ ಫೆಸ್ಟ್, ದೇಶದಲ್ಲಿ ನಡೆದ ಮೊದಲ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಡೆಯಿತು. ಮಾತ್ರವಲ್ಲದೆ ರಾಂಪ್ ವಾಕ್ ನಡೆಸಿದ ಸ್ನೇಹಾಲಯದ 49 ನಿವಾಸಿಗಳ ಉತ್ಸಾಹ, ಆತ್ಮವಿಶ್ವಾಸ ಹಾಗೂ ಆಶಾವಾದಿತನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಸ್ನೇಹಾಲಯದ ಸಂಸ್ಥಾಪಕರು ಹಾಗೂ ಟ್ರಸ್ಟಿಗಳು ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.

ಮಂಜೇಶ್ವರ ಶಾಸಕ ಎ.ಕೆ. ಎಮ್ ಅಶ್ರಫ್ ಹಾಗೂ ಬ್ರದರ್ ಜೋಸೆಪ್ ಕ್ರಾಸ್ತಾ ಫ್ಯಾಷನ್ ಫೆಸ್ಟ್ ನ ಧ್ಯೇಯೋದ್ದೇಶಗಳನ್ನು ತಿಳಿಸುವ ಫಲಕದ ಅನಾವರಣಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನ ಮೊಂತೆರೊ, ಖ್ಯಾತ ನಿರೂಪಕ ವಿ.ಜೆ ಡಿಕ್ಸನ್, ಖ್ಯಾತ ಛಾಯಾಗ್ರಾಹಕ ಶಂಸುದಿನ್ ತಾಂಡಿಲ, ಡಿಜೆ ಶಾಡ್ಜ್, ಅಂತರಾಷ್ಟ್ರೀಯ ಫ್ಯಾಷನ್ ಶೋ ನಿರ್ದೇಶಕ ಶನೋಜ್ ಇರಾನಿ, ನೃತ್ಯ ಸಂಯೋಜಕಿ ಸಜ್ನಾ ಸಾಜ್, ವಸ್ತ್ರ ವಿನ್ಯಾಸಕಾರ ಯಜ್ಞೇಶ್ ಅಮೀನ್ ಉಳ್ಳಾಲ್, ಕರಾವಳಿ
ಸುದ್ದಿ ಪತ್ರಿಕೆ ಸಂಪಾದಕ ರೋಶನ್ ಮಾರ್ಟಿಸ್, ಮಂಗಳೂರು ಪ್ರಾಂತ್ಯ ಕ್ಯಾಥೋಲಿಕ್ ಮಹಾ ಸಭಾದ ಅಧ್ಯಕ್ಷ ಅಲ್ವಿನ್ ಡಿಸೋಜಾ, ಸೌದಿ ಸ್ನೇಹಿತರ ಸಂಘದ ನವೀನ್ ಮೊಂತೆರೊ, ಸಂತೋಷ ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ ಸಾಂಸ್ಥಾಪಕ ಎಂ.ಎಸ್.ಥಾಮಸ್ ಸಿತಂಗೋಳಿ, ಶ್ರೀ ಫ್ಯಾಷನ್ ಮಾಡೆಲ್ ಹಾಗೂ ಶೋ ಡೈರೆಕ್ಟರ್ ಶೋಭಿತ್ ಹಾಗೂ ವಸ್ತ್ರ ವಿನ್ಯಾಸಗಾರ್ತಿ ಅಕ್ಷಯ ಉಪಸ್ಥಿತತರಿದ್ದರು.

ಈ ಅಪರೂಪದ ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಶೋಭಿತ್ ಹಾಗೂ ಅಕ್ಷಯ ಇವರನ್ನು ಸನ್ಮಾನಿಸಲಾಯಿತು.

ಮಂಗಳೂರಿನ ಖ್ಯಾತ ಕಾರ್ಯನಿರ್ವಾಹಕಿ ಲವಿಟ ಮಿನೇಜಸ್ ಕಾರ್ಯಕ್ರಮವನ್ನು ನಿರೂಪಿಸಿದರು.