ಉಡುಪಿ: ಉಡುಪಿ ಪ್ರಕರಣ ಗಂಭೀರ ಸ್ವರೂಪದ ಆರೋಪವಾಗಿದ್ದು, ಪೊಲೀಸರು ಕಾಟಾಚಾರಕ್ಕೆ ಎಫ್. ಐ.ಆರ್ ಸಲ್ಲಿಸಿ ಆರೋಪಿಗಳನ್ನು ಪರೋಕ್ಷವಾಗಿ ರಕ್ಷಿಸುತ್ತಿರುವುದು ಕಂಡು ಬರುತ್ತಿದೆ. ಈ ಕೃತ್ಯದ ಹಿಂದೆ ಸಾಮಾಜಿಕ ಶಾಂತಿ ಕದಡಿಸುವ ಹಲವಾರು ಸಂಘ ಮತ್ತು ಸಂಘಟನೆಗಳು ಇದ್ದು, ಇದರ ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸಿ ಶಿಕ್ಷೆ ನೀಡಬೇಕೆಂದು ಉಡುಪಿ ಹಿರಿಯ ನ್ಯಾಯವಾದಿ ಮತ್ತು ನೋಟರಿ, ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಇಲಾಖೆಯ ನ್ಯಾಯವಾದಿ ಶಿರಿಯಾರ ಕಲ್ಮರ್ಗಿ ಪ್ರಭಾಕರ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.