ರೋಟರಾಕ್ಟ್ ಕ್ಲಬ್ ಉಡುಪಿಯ ನೂತನ ಅಧ್ಯಕ್ಷೆಯಾಗಿ ರೋಟರಾಕ್ಟರ್ ತನ್ವಿ ವಿಶಿಷ್ಟ ಅಧಿಕಾರ ಸ್ವೀಕಾರ

ಉಡುಪಿ: ರೋಟರಿ ಜಿಲ್ಲೆ 3182, ವಲಯ 4ರ ಪ್ರತಿಷ್ಟಿತ ರೋಟರಾಕ್ಟ್ ಕ್ಲಬ್ ಉಡುಪಿ ಇದರ 2023-24ನೇ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಜು.16 ರಂದು ಸಂಜೆ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಿತು. ಪದ ಪ್ರಧಾನ ಅಧಿಕಾರಿ, ರೋಟರಿ ಉಡುಪಿಯ ಅಧ್ಯಕ್ಷೆ ರೋ. ದೀಪಾ ಭಂಡಾರಿಯವರು ನೂತನ ಅಧ್ಯಕ್ಷೆ ರೋಟರಾಕ್ಟರ್ ತನ್ವಿ ವಿಶಿಷ್ಟ ಅವರಿಗೆ ಹಾಗೂ ಕಾರ್ಯದರ್ಶಿ ರೋಟರಾಕ್ಟರ್ ಅಂಶ್ ಕೋಟ್ಯಾನ್ ಅವರಿಗೆ ಪದ ಪ್ರಧಾನ ಮಾಡಿ, ಪ್ರಮಾಣ ವಚನ ಭೋದಿಸಿದರು.

ಮುಖ್ಯ ಅತಿಥಿಗಳಾದ ರೋಟರಾಕ್ಟ್ ಜಿಲ್ಲಾ ಚೇರ್ಮನ್ ರೋ. ಸುಬ್ರಹ್ಮಣ್ಯ ಬಾಸ್ರಿ ಕೆ.ಎಸ಼್. ಅವರು ನೂತನ ಸದಸ್ಯರಿಗೆ ಪ್ರಮಾಣ ವಚನ ಭೋದಿಸಿದರು ಹಾಗೂ ಇನ್ನೋರ್ವ ಮುಖ್ಯ ಅತಿಥಿ, ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ರೋಟರಾಕ್ಟರ್ ಶ್ರುತಿ ಶೆಣೈ ಅವರು ರೋಟರಾಕ್ಟ್ ಕ್ಲಬ್ ಉಡುಪಿಯು ಜಿಲ್ಲಾ ಕಾರ್ಯಕ್ರಮಗಳ ಅಂಗವಾಗಿ ಸಗ್ರಿ ನೋಳೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ವಿವಿಧ ಯೋಜನೆಗಳಿಗಾಗಿ ದತ್ತು ಸ್ವೀಕರಿಸುವ ಪ್ರಕ್ರಿಯೆಯನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಘೋಷಣಾಪತ್ರವನ್ನು ಹಸ್ತಾಂತರಿಸುವ ಮೂಲಕ ಹಾಗೂ ಶಾಲೆಯ ಉಪಯೋಗಕ್ಕಾಗಿ 20 ಕುರ್ಚಿಗಳನ್ನು ಸಾಂಕೇತಿಕವಾಗಿ ನೀಡುವ ಮೂಲಕ ಚಾಲನೆಗೈದರು. ಗೌರವಾನ್ವಿತ ಅತಿಥಿಗಳಾಗಿ ರೋಟರಿ ಉಡುಪಿಯ ಯುವಜನ ಸೇವಾ ನಿರ್ದೇಶಕ – ರೋ. ಹೇಮಂತ್ ಯು. ಕಾಂತ್, ರೋಟರಾಕ್ಟ್ ಚೇರ್ಮನ್ ರೋ. ಪದ್ಮಿನಿ ಭಟ್ ಮತ್ತು ರೋಟರಾಕ್ಟ್ ವಲಯ ಪ್ರತಿನಿಧಿ – ರೋಟರಾಕ್ಟರ್ ಅಶ್ವಿಜಾ ಕೆದ್ಲಾಯ ಅವರು ಭಾಗವಹಿಸಿ, ‌ಸಂಸ್ಥೆಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಓರ್ವ ಪ್ರತಿಭಾನ್ವಿತ ವಿಧ್ಯಾರ್ಥಿನಿಗೆ ಮುಂದಿನ ಪದವಿ ಪೂರ್ವ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡಲಾಯಿತು ಮತ್ತು ಅರ್ಹ ಹೈಸ್ಕೂಲ್ ವಿದ್ಯಾರ್ಥಿಯೊಬ್ಬನಿಗೆ ಶಾಲೆಗೆ ಹೋಗಿ-ಬರಲು ಬೈಸಿಕಲ್ ಅನ್ನು ವಿತರಿಸಲಾಯಿತು. ರೋಟರಿ ಜಿಲ್ಲಾ ಕಾರ್ಯಕ್ರಮಗಳ ಅಂಗವಾಗಿ ಸುರಕ್ಷಿತ ವಾಹನ ಚಾಲನೆಯ ಸಂದೇಶವುಳ್ಳ ಕಾರ್ ಸ್ಟಿಕ್ಕರ್ ಗಳನ್ನು ಬಿಡುಗಡೆ ಗೊಳಿಸಲಾಯಿತು.

ನಿರ್ಗಮನ ಅಧ್ಯಕ್ಷ ರೋಟರಾಕ್ಟರ್ ಶ್ರೀಹರಿ ಕೆ. ಎಸ್. ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ರೋಟರಾಕ್ಟರ್ ಸಂಭ್ರಮ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ರೋಟರಾಕ್ಟರ್ ಅಂಶ್ ಕೋಟ್ಯಾನ್ ವಂದಿಸಿದರು. ರೋಟರಾಕ್ಟರ್ ನಿಖಿತಾ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ರೋಟರಿ ಹಾಗೂ ರೋಟರಾಕ್ಟ್ ಕ್ಲಬ್ ಗಳ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.