ಬೆಂಗಳೂರು: ಮಂಗಳವಾರ ರಾಜ್ಯ ರಾಜಧಾನಿಯಲ್ಲಿ ನಡೆದ ಪ್ರತಿಪಕ್ಷಗಳ ನಾಲ್ಕು ಗಂಟೆಗಳ ಸುದೀರ್ಘ ಸಭೆಯ ಕೊನೆಯಲ್ಲಿ, 26 ಪಕ್ಷಗಳು ತಮ್ಮ ಮೈತ್ರಿಕೂಟದ ಹೆಸರನ್ನು INDIA ಎಂದು ಘೋಷಿಸಿಕೊಂಡವು. INDIA- Indian National Developmental, Inclusive Alliance (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ, ಅಂತರ್ಗತ ಮೈತ್ರಿ).
ಪ್ರತಿಪಕ್ಷಗಳು 2024 ರ ಚುನಾವಣಾ ಸ್ಪರ್ಧೆಯನ್ನು ಬಿಜೆಪಿ ಮತ್ತು ದೇಶದ ಉಳಿದ ಭಾಗಗಳ ನಡುವಿನ ಹೋರಾಟ ಎಂದು ರೂಪಿಸಿದ್ದು, ಮಂಗಳವಾರ ಬೆಳಗ್ಗೆ ಮುಖಂಡರು ಸಭೆಗೆ ಕುಳಿತುಕೊಳ್ಳುವ ಮುನ್ನವೇ ಹೆಸರನ್ನು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ಆಯೋಜಿಸಿದ ಔತಣಕೂಟದ ನಂತರ ಆಯ್ದ ನಾಯಕರ ಗುಂಪು ಭೇಟಿಯಾಗಿದ್ದು ಈ ಗುಂಪಿನಲ್ಲಿ ಹಲವಾರು ಹೆಸರುಗಳು ಹೊರಹೊಮ್ಮಿವೆ. ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಎರಡು ಭಾರತಗಳ ನಡುವೆ ಬೆಳೆಯುತ್ತಿರುವ ಕಂದಕವನ್ನು ಒತ್ತಿಹೇಳಿದ್ದು ಕಾಂಗ್ರೆಸ್ ಇದನ್ನು ಪರಿಹರಿಸಲು ಮೈತ್ರಿಯ ಹೆಸರನ್ನು ಬಯಸಿತು ಎನ್ನಲಾಗಿದೆ.
‘ರಾಷ್ಟ್ರೀಯತೆ’ಯನ್ನು ಬಿಂಬಿಸಲು ಪ್ರತಿಪಕ್ಷಗಳು ಈ ಹೆಸರನ್ನು ಆಯ್ದುಕೊಂಡಿವೆ ಎಂದು ಮೂಲಗಳು ತಿಳಿಸಿವೆ.