ಮೀರ್‌ಪುರ್ (ಬಾಂಗ್ಲಾದೇಶ): ಢಾಕಾದ ಶೇರ್ -ಎ- ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಳೆ ಕಾರಣ ಡಿಎಲ್ಎಸ್ ಅನ್ವಯ 44 ಓವರ್ಗಳಿಗೆ ಏಕದಿನ ಪಂದ್ಯವನ್ನು ಸೀಮಿತಗೊಳಿಸಲಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡ 34 ಓವರ್ಗಳಲ್ಲಿ 152 ರನ್ ಗಳಿಸಿ ಆಲೌಟ್ ಆಗಿತ್ತು. ಈ ಸಾಧಾರಣ ಮೊತ್ತದ ಗುರಿ ತಲುಪುವಲ್ಲಿ ಭಾರತೀಯ ತಂಡ ವಿಫಲವಾಗಿದೆ. 35.5 ಓವರ್ಗಳಲ್ಲಿ ಕೇವಲ 113 ರನ್ಗಳಿಗೆ ಸರ್ವಪತನ ಕಂಡಿದೆ. ಈ ಗೆಲುವಿನ ಮೂಲಕ ಬಾಂಗ್ಲಾ ಮಹಿಳಾ ತಂಡವು ಐತಿಹಾಸ ನಿರ್ಮಿಸಿದೆ. ಇದು ಭಾರತದ ವಿರುದ್ಧ ಬಾಂಗ್ಲಾ ಕಂಡ ಮೊದಲ ಏಕದಿನ ಪಂದ್ಯದ ಜಯವಾಗಿದೆಏಕದಿನ ಮಾದರಿ ಕ್ರಿಕೆಟ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತೀಯ ವನಿತೆಯರ ತಂಡ ಮೊದಲ ಬಾರಿಗೆ ಸೋಲು ಕಂಡಿದೆ. ಭಾರತ ಮತ್ತು ಬಾಂಗ್ಲಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, 40 ರನ್ಗಳಿಂದ ಸೋಲಿಗೆ ಶರಣಾಗಿದೆ.ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾ ಮಹಿಳಾ ತಂಡವು ಐತಿಹಾಸ ನಿರ್ಮಿಸಿದೆ.
ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಹರ್ಮನ್‌ಪ್ರೀತ್ ಕೌರ್ ಪಡೆ ಉತ್ತಮವಾದ ಬೌಲಿಂಗ್ ಪ್ರರ್ದಶಿಸಿತ್ತು. ಆದರೆ, ಸ್ಥಿರ ಬ್ಯಾಟಿಂಗ್ ಮಾಡುವಲ್ಲಿ ಆಟಗಾರ್ತಿಯರಿಗೆ ಸಾಧ್ಯವಾಗಲಿಲ್ಲ. ಪಂದ್ಯದ ಉದ್ದಕ್ಕೂ ತಂಡದ ರನ್ ರೇಟ್ಗೆ ಯಾವುದೇ ಕೊರತೆ ಇರಲಿಲ್ಲ. ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ದೀಪ್ತಿ ಶರ್ಮಾ ಭಾರತ ಪರವಾಗಿ ವೈಯಕ್ತಿಕ ಗರಿಷ್ಠ 20 ರನ್ ಗಳಿಸಲು ಶಕ್ತರಾದರು.
ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಯಾಸ್ತಿಕಾ ಭಾಟಿಯಾ (15) ಅವರನ್ನು ರಬೇಯಾ ಖಾನ್ ಬೌಲ್ಡ್ ಮಾಡಿದರು. ನಂತರ ಜೆಮಿಮಾ ರಾಡ್ರಿಗಸ್ (10) ಸಹ ರಬೇಯಾ ಖಾನ್ ಬೌಲಿಂಗ್ನಲ್ಲಿ ಕ್ಯಾಚಿತ್ತು ನಿರ್ಮಿಸಿದರು. ಈ ಮೂಲಕ 61 ರನ್ಗೆ ಭಾರತ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರ ನಡುವೆ ದೀಪ್ತಿ ಶರ್ಮಾ ಮತ್ತು ಅಮನ್‌ಜೋತ್ ಕೌರ್ ಜೋಡಿ ತಂಡಕ್ಕೆ ಆಸರೆಯಾಗುವ ಮನ್ಸೂಚನೆ ನೀಡಿತ್ತು. 6ನೇ ವಿಕೆಟ್‌ಗೆ 30 ರನ್‌ಗಳ ಜೊತೆಯಾಟ ನೀಡಿತ್ತು. ಆದರೆ, ತಂಡದ ಮೊತ್ತ 91 ರನ್ ಆಗಿದ್ದಾಗ ಮಾರುಫಾ ಅಕ್ಟರ್ ಹಾಗೂ ರಬೇಯಾ ಖಾನ್ ಮತ್ತೆ ಭಾರತಕ್ಕೆ ಶಾಕ್ ನೀಡಿದರು. ಈ ಇಬ್ಬರ ಬೌಲಿಂಗ್ನಲ್ಲಿ ಭಾರತ ಹ್ಯಾಟ್ರಿಕ್ ವಿಕೆಟ್ ಕಳೆದುಕೊಂಡಿತು.
ಮಾರುಫಾ ಅಕ್ಟರ್ ಹಾಗೂ ರಬೇಯಾ ಖಾನ್ ಮಿಂಚು: ಬಾಂಗ್ಲಾ ಬೌಲರ್ಗಳಾದ ಮಾರುಫಾ ಅಕ್ಟರ್ ಹಾಗೂ ರಬೇಯಾ ಖಾನ್ ಅವರು ಭಾರತೀಯ ಬ್ಯಾಟರ್ಗಳನ್ನು ಕಾಡಿದರು. ಮಾರುಫಾ ಅಕ್ಟರ್ ಅವರು ಆರಂಭಿಕರಾದ ಸ್ಮೃತಿ ಮಂಧಾನ (11), ಪ್ರಿಯಾ ಪೂನಿಯಾ (10) ಅವರನ್ನು ಬೇಗ ಕಟ್ಟಿ ಹಾಕಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ನಾಯಕಿ ಹರ್ಮನ್‌ಪ್ರೀತ್ ಕೌರ್ 5 ರನ್ಗೆ ನಹಿದಾ ಆಕ್ಟರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಸಿಲುಕಿ ಪೆವಿಲಿಯನ್ ಸೇರಿದರು.
ಪಾದಾರ್ಪಣೆ ಪಂದ್ಯದಲ್ಲಿ 4 ಟಿಕೆಟ್ ಕಿತ್ತಿದ್ದ ಅಮನ್‌ಜೋತ್ ಕೌರ್: ಮತ್ತೊಂದೆಡೆ, ಭಾರತ ತಂಡ ಸೋತರೂ ಪಾದಾರ್ಪಣೆ ಪಂದ್ಯದಲ್ಲೇ ಅಮನ್‌ಜೋತ್ ಕೌರ್ ಬೌಲಿಂಗ್ನಲ್ಲಿ ಗಮನ ಸೆಳೆದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಅಮನ್‌ಜೋತ್ ಕೌರ್ 4 ಟಿಕೆಟ್ ಕಬಳಿಸಿದರು. 9 ಓವರ್ ಬೌಲ್ ಮಾಡಿದ 23 ವರ್ಷದ ಯುವ ಆಟಗಾರ್ತಿ 2 ಮೇಡಿನ್ಗಳೊಂದಿಗೆ 31 ರನ್ ನೀಡಿ 4 ವಿಕೆಟ್ ಪಡೆದರು. ಆದರೆ, 9 ವೈಡ್ಗಳನ್ನು ಕೌರ್ ಎಸೆದರು.
28ನೇ ಓವರ್ ಎಸೆದ ಮಾರುಫಾ ಅಕ್ಟರ್ ಕೊನೆಯ ಎರಡು ಬಾಲ್ಗಳಲ್ಲಿ ಅಮನ್‌ಜೋತ್ ಕೌರ್ (15) ಹಾಗೂ ಸ್ನೇಹಾ ರಾಣಾ (0) ವಿಕೆಟ್ ಕಿತ್ತಿದರು. ನಂತರದ ಓವರ್ನಲ್ಲಿ ಬೌಲಿಂಗ್ ಮಾಡಿದ ರಬೇಯಾ ಖಾನ್ ಮೊದಲ ಎಸತೆದಲ್ಲಿ ದೀಪ್ತಿ ಶರ್ಮಾ ವಿಕೆಟ್ ಉರುಳಿಸಿದರು. ಇದರಿಂದ ಭಾರತ ದಿಢೀರ್ ಕುಸಿತ ಕಂಡು ಸೋಲಿನ ಸುಳಿಗೆ ಸಿಲುಕಿತು. ಕೊನೆಯಲ್ಲಿ ಪೂಜಾ ವಸ್ತ್ರಕರ್ 7 ರನ್ ಹಾಗೂ ಬಾರೆಡ್ಡಿ ಅನುಷಾ 2 ರನ್ ಹಾಗೂ ದೇವಿಕಾ ವೈದ್ಯ ಅಜೇಯ 10 ರನ್ಗೆ ಸೀಮಿತವಾದರು. ಬಾಂಗ್ಲಾ ಪರ ಮಾರುಫಾ ಅಕ್ಟರ್ 29 ರನ್ಗೆ 4 ವಿಕೆಟ್ ಪಡೆದರೆ, ರಬೇಯಾ ಖಾನ್ 30 ರನ್ಗೆ 3 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.