ಕುಂದಾಪುರ: ಮರವಂತೆಯ ಅರಬ್ಬೀ ಸಮುದ್ರ ಹಾಗೂ ಸೌಪರ್ಣಿಕಾ ನದಿ ತಟದಲ್ಲಿರುವ ಶ್ರೀ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಈ ಬಾರಿಯ ಕರ್ಕಾಟಕ ಅಮಾವಾಸ್ಯೆ ಜಾತ್ರೆಯು ಜು.17 ಕ್ಕೆಂದು ಕೆಲವು ಕ್ಯಾಲೆಂಡರ್ಗಳಲ್ಲಿ ತಪ್ಪಾಗಿ ಪ್ರಕಟಣೆಗೊಂಡಿದ್ದು ಈ ವರ್ಷ ಆ.16 ರಂದು ಮರವಂತೆ ಜಾತ್ರೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.
ಕರ್ಕಾಟಕ ಮಾಸದಲ್ಲಿ ಬರುವ ಅಮಾವಾಸ್ಯೆ ದಿನ ಶ್ರೀ ವರಾಹ ಸ್ವಾಮಿಯ ವಾರ್ಷಿಕ ಹಬ್ಬ ನಡೆಯುವುದು ದೇವಸ್ಥಾನದ ಪರಂಪರೆಯಾಗಿದೆ. ಆದರೆ ಕೆಲವು ಕ್ಯಾಲೆಂಡರ್ ಹಾಗೂ ಪಂಚಾಂಗದಲ್ಲಿ ಜು. 17ರಂದು ಕರ್ಕಾಟಕ ಅಮಾವಾಸ್ಯೆಯೆಂದು ತಪ್ಪಾಗಿ ಮುದ್ರಿತಗೊಂಡಿದೆ. ಆದರೆ ಮರವಂತೆಯಲ್ಲಿ ಈ ವರ್ಷದ ಕರ್ಕಾಟಕ ಅಮಾವಾಸ್ಯೆ ಜಾತ್ರೆಯು ಆ. 16ರಂದು ನಡೆಯಲಿದೆ. ಎಲ್ಲ ಭಕ್ತರು ಗೊಂದಲ ಮಾಡಿಕೊಳ್ಳದೆ ಸಹಕರಿಸಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ. ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.