ಇಸ್ರೋ ಎಸ್‌ಎಸ್‌ಎಲ್‌ವಿ ಉದ್ಯಮ ವರ್ಗಾವಣೆಗೆ ಘೋಷಣೆ

ನವದೆಹಲಿ: ಎಸ್‌ಎಸ್‌ಎಲ್‌ವಿ ಇಸ್ರೋ ಅಭಿವೃದ್ಧಿಪಡಿಸಿದ ಆರನೇ ಉಡಾವಣಾ ವಾಹಕವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಎರಡು ಅಭಿವೃದ್ಧಿ ಪಡಿಸಲಾದ ವಾಹಕಗಳು ಹಾರಾಟ ನಡೆಸಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಎಸ್‌ಎಸ್‌ಎಲ್‌ವಿಯ ಮೊದಲ ಹಾರಾಟವು ಎರಡನೇ ಹಂತದ ಬೇರ್ಪಡಿಕೆ ಸಮಯದಲ್ಲಿ ಎಕ್ವಿಪ್‌ಮೆಂಟ್ ಬೇ ಡೆಕ್‌ನಲ್ಲಿ ಅಲ್ಪಾವಧಿಗೆ ಕಂಪನ ಅಡಚಣೆಯಿಂದಾಗಿ ವಿಫಲವಾಗಿತ್ತು. ಈ ದೋಷದ ಬಗ್ಗೆ ಆಳವಾದ ವಿಶ್ಲೇಷಣೆಯನ್ನು ನಡೆಸಿದ ನಂತರ, ಇಸ್ರೋ ಸರಿಪಡಿಸುವ ಕ್ರಮಗಳನ್ನು ಕೈಗೊಂಡಿತ್ತು. ಫೆಬ್ರವರಿಯಲ್ಲಿ ಎಸ್​ಎಸ್​ಎಲ್​ವಿಯ ಯಶಸ್ವಿ ಉಡಾವಣೆ ನಡೆಸಿತು. ಎಸ್​ಎಸ್​ಎಲ್​ವಿ ಇಸ್ರೋದ ಇಒಎಸ್​-07 ಉಪಗ್ರಹ, ಯುಎಸ್​ ಮೂಲದ ಸಂಸ್ಥೆ ಅಂತರಿಸ್​ನ ಜಾನಸ್-1 ಹಾಗೂ ಚೆನ್ನೈ ಮೂಲದ ಬಾಹ್ಯಾಕಾಶ ಸ್ಟಾರ್ಟ್ ಅಪ್ ಸ್ಪೇಸ್ ಕಿಡ್ಜ್‌ನ ಆಜಾದಿಸ್ಯಾಟ್-2 ಉಪಗ್ರಹಗಳನ್ನು 450 ಕಿ.ಮೀ ವೃತ್ತಾಕಾರದ ಕಕ್ಷೆಗೆ ಸೇರಿಸಿತು.
ಸಣ್ಣ ಉಪಗ್ರಹಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೋ) ತನ್ನ ”ಸಣ್ಣ ಉಪಗ್ರಹ ಉಡಾವಣಾ ವಾಹಕ”ವನ್ನು (ಎಸ್‌ಎಸ್‌ಎಲ್‌ವಿ) ಖಾಸಗಿ ವಲಯಕ್ಕೆ ವರ್ಗಾಯಿಸಲಾಗುವುದಾಗಿ ಸೋಮವಾರ ಪ್ರಕಟಿಸಿದೆ. ಎರಡು ಅಭಿವೃದ್ಧಿ ಹೊಂದಿರುವ ಎಸ್​ಎಸ್​ಎಲ್​ವಿಯು, 500 ಕೆಜಿ ತೂಕದ ಉಪಗ್ರಹಗಳನ್ನು ಭೂಮಿಯ ಕಕ್ಷೆಯಲ್ಲಿ ಸೇರಿಸುವ ಬೇಡಿಕೆಯ ಸೇವೆಗಳನ್ನು ಒದಗಿಸಲು ಮುಂದಾಗಿದೆ.ಚಂದ್ರಯಾನ-3 ಉಡಾವಣೆಗೆ ಕೆಲವು ದಿನಗಳ ಮೊದಲು, ಸಣ್ಣ ಉಪಗ್ರಹಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ತನ್ನ ‘ಸಣ್ಣ ಉಪಗ್ರಹ ಉಡಾವಣಾ ವಾಹಕ’ವನ್ನು (ಎಸ್​ಎಸ್​ಎಲ್​ವಿ) ಖಾಸಗಿ ವಲಯಕ್ಕೆ ವರ್ಗಾಯಿಸುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಘೋಷಣೆ ಮಾಡಿದೆ.

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದೇನು?: “ನಾವು ನಮ್ಮದೇ ಆದ ಎಸ್​ಎಸ್​ಎಲ್​ವಿ ಅನ್ನು ನಿರ್ಮಿಸಿದ್ದೇವೆ. ಅದನ್ನು ಉದ್ಯಮಕ್ಕೆ ವರ್ಗಾಯಿಸಲಾಗುವುದು ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಲಾಗುವುದು” ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು, ಎಸ್​ಐಎ ಇಂಡಿಯಾ ಆಯೋಜಿಸಿದ್ದ ಇಂಡಿಯಾ ಸ್ಪೇಸ್ ಕಾಂಗ್ರೆಸ್ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು. ಮಿನಿ ರಾಕೆಟ್ ಅನ್ನು ಉದ್ಯಮಕ್ಕೆ ವರ್ಗಾಯಿಸಲು ಬಿಡ್ಡಿಂಗ್ ಮಾರ್ಗವನ್ನು ಆಯ್ಕೆ ಮಾಡಲು ಬಾಹ್ಯಾಕಾಶ ಸಂಸ್ಥೆ ನಿರ್ಧರಿಸಿದೆ ಎಂದರು.

2025ರ ವೇಳೆಗೆ ಆರ್ಥಿಕತೆಗೆ 13 ಶತಕೋಟಿ ಡಾಲರ್​ ಲಾಭ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಮತ್ತು ಸಲಹಾ ಸಂಸ್ಥೆ ಇವೈ ಇಂಡಿಯಾ ಸಿದ್ಧಪಡಿಸಿದ ಇತ್ತೀಚಿನ ವರದಿಯು ವಾಣಿಜ್ಯ ಉಪಗ್ರಹ ಉಡಾವಣಾ ಸೇವೆಗಳು ಭಾರತದ ದೇಶೀಯ ಬಾಹ್ಯಾಕಾಶ ಉದ್ಯಮವು 2025ರ ವೇಳೆಗೆ ಆರ್ಥಿಕತೆಗೆ 13 ಶತಕೋಟಿ ಡಾಲರ್​ ಕೊಡುಗೆಯನ್ನು ನೀಡಲಿದೆ ಎಂದು ಹೇಳಿದೆ. ಎಸ್​ಎಸ್​ಎಲ್​ವಿ ಉಪಗ್ರಹ ಉಡಾವಣೆಯ ನಂತರ ಇಸ್ರೋ ಅಭಿವೃದ್ಧಿಪಡಿಸಿದ ಆರನೇ ಉಡಾವಣಾ ವಾಹಕವಾಗಿದೆ. ವಾಹಕ-3 (ಎಸ್​ಎಲ್​​ವಿ-3), ಸುಧಾರಿತ ಉಪಗ್ರಹ ಉಡಾವಣಾ ವಾಹಕ (ಎಎಸ್​ಎಲ್​ವಿ), ಪೋಲಾರ್ ಉಪಗ್ರಹ ಉಡಾವಣಾ ವಾಹಕ (ಪಿಎಸ್​ಎಲ್​ವಿ), ಜಿಯೋಸಿಂಕ್ರೊನಸ್ ಉಪಗ್ರಹ ಉಡಾವಣಾ ವಾಹಕ (ಜಿಎಸ್​ಎಸ್​ವಿ) ಮತ್ತು ಲಾಂಚ್ ವೆಹಿಕಲ್ ಮಾರ್ಕ್-3 (ಎಲ್​ವಿಎಂ-3) ಇವು ಇಸ್ರೋ ಸಿದ್ಧಪಡಿಸಿದ ರಾಕೆಟ್​ಗಳಾಗಿವೆ​. ಇದರಲ್ಲಿ ಎಸ್‌ಎಲ್‌ವಿ-3 ಮತ್ತು ಎಎಸ್‌ಎಲ್‌ವಿಯ ಉತ್ಪಾದನೆ ಹಾಗೂ ಬಳಕೆಯನ್ನು ನಿಲ್ಲಿಸಲಾಗಿದೆ.

ಎಸ್​ಎಸ್‌ಎಲ್​ವಿ ನಂತಹ ಸಣ್ಣ ರಾಕೆಟ್‌ಗಳು, ಕ್ರಮವಾಗಿ 10 ಕೆಜಿ ಹಾಗೂ 100 ಕೆಜಿಗಿಂತ ಕಡಿಮೆ ತೂಕದ ನ್ಯಾನೊ ಮತ್ತು ಸೂಕ್ಷ್ಮ-ಉಪಗ್ರಹಗಳನ್ನು ಸಾಗಿಸಲು ದೊಡ್ಡ ರಾಕೆಟ್‌ಗಳಿಗಾಗಿ ಕಾಯುವ ಅಗತ್ಯವಿಲ್ಲ. ಬದಲಾಗಿ ಬೇಡಿಕೆಯ ಅನ್ವಯ ಉಡಾವಣಾ ಸೇವೆಗಳನ್ನು ಒದಗಿಸುತ್ತವೆ. ಕಳೆದ ವರ್ಷ, ಇಸ್ರೋ ಐದು ಧ್ರುವೀಯ ಉಪಗ್ರಹ ಉಡಾವಣಾ ವಾಹನಗಳ (ಪಿಎಸ್​ಎಲ್​ವಿಗಳು) ಮೂಲಕ 54 ಯಶಸ್ವಿ ಉಪಗ್ರಹಗಳನ್ನು ಉಡಾವಣೆಗಳನ್ನು ಮಾಡಲು, ಈ ರಾಕೆಟ್ ನಿರ್ಮಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಲಾರ್ಸನ್ ಮತ್ತು ಟೌಬ್ರೊದ ಒಕ್ಕೂಟವು ಗುತ್ತಿಗೆ ನೀಡಿತ್ತು.