ಮಿಸ್ ಯೂನಿವರ್ಸ್ ನೆದರ್ಲ್ಯಾಂಡ್ಸ್ ಕಿರೀಟ ಪಡೆದ ʻಟ್ರಾನ್ಸ್ಜೆಂಡರ್ʼ ಮಾಡೆಲ್ ʻರಿಕ್ಕಿ ವ್ಯಾಲೆರಿ ಕೊಲ್ಲೆʼ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಿಸ್ ಯೂನಿವರ್ಸ್ ನೆದರ್‌ಲ್ಯಾಂಡ್ಸ್ 2023 ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ಟ್ರಾನ್ಸ್‌ಜೆಂಡರ್ ಮಾಡೆಲ್ ರಿಕ್ಕಿ ವ್ಯಾಲೆರಿ ಕೊಲ್ಲೆಗೆ ಜುಲೈ 8 ರಂದು(ಶನಿವಾರ) ಲ್ಯೂಸ್ಡೆನ್‌ನಲ್ಲಿರುವ AFAS ಥಿಯೇಟರ್‌ನಲ್ಲಿ ನೀಡಲಾಯಿತು.ರಿಕ್ಕಿ ವಾಲೆರಿ ಕೊಲ್ಲೆ(Rikkie Valerie Kollé) ಮಿಸ್ ಯೂನಿವರ್ಸ್ ನೆದರ್‌ಲ್ಯಾಂಡ್ಸ್ 2023 ಕಿರೀಟವನ್ನು ಪಡೆದ ಮೊದಲ ಟ್ರಾನ್ಸ್‌ಜೆಂಡರ್ ಆಗಿದ್ದು, ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಇನ್ನೂ, ಆಮ್ಸ್ಟರ್‌ಡ್ಯಾಮ್‌ನ 26 ವರ್ಷದ ನಥಾಲಿ ಮೊಗ್ಬೆಲ್ಜಾಡಾ ಮೊದಲ ರನ್ನರ್ ಅಪ್ ಎಂದು ಹೆಸರಿಸಲ್ಪಟ್ಟರೆ, ಹಬೀಬಾ ಮೊಸ್ತಫಾ ಮತ್ತು ಲೌ ಡಿರ್ಚ್‌ಗಳು ಕ್ರಮವಾಗಿ ಮಿಸ್ ಕಾನ್ಜಿನಿಯಾಲಿಟಿ ಮತ್ತು ಮಿಸ್ ಸೋಷಿಯಲ್ ಮೀಡಿಯಾ ಪ್ರಶಸ್ತಿಯನ್ನು ಪಡೆದರು.ರಿಕ್ಕಿ ವ್ಯಾಲೆರಿ ಈಗ ಎಲ್ ಸಾಲ್ವಡಾರ್‌ನಲ್ಲಿ 72 ನೇ ವಿಶ್ವ ಸುಂದರಿ (ಮಿಸ್ ಯೂನಿವರ್ಸ್ 2023) ನಲ್ಲಿ ನೆದರ್ಲ್ಯಾಂಡ್ಸ್ ಅನ್ನು ಪ್ರತಿನಿಧಿಸಲು ತಯಾರಿ ನಡೆಸಲಿದ್ದಾರೆ.