ಢಾಕಾ (ಬಾಂಗ್ಲಾದೇಶ): ಶೇರ್-ಎ- ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನೀಡಿದ್ದ 114 ರನ್ನ ಸುಲಭ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತ 3.4 ಓವರ್ ಮತ್ತು 7 ವಿಕೆಟ್ನಿಂದ ಭಾರತ ಗೆದ್ದುಕೊಂಡಿದೆ.ಬಾಂಗ್ಲಾದೇಶ ಪ್ರವಾಸದಲ್ಲಿರುವ ಭಾರತದ ವನಿತೆಯರ ಕ್ರಿಕೆಟ್ ತಂಡ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಅರ್ಧ ಶತಕದ ನೆರವಿನಿಂದ ಮೊದಲ ಟಿ 20 ಪಂದ್ಯವನ್ನು ಗೆದ್ದುಕೊಂಡಿದೆ.ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಭರ್ಜರಿ ಜಯ ದಾಖಲಿಸಿದ್ದಾರೆ.
ಬೆನ್ನತ್ತಿದ ಭಾರತಕ್ಕೆ ಮೂರನೇ ಬಾಲ್ನಲ್ಲೇ ಆರಂಭಿಕ ಆಘಾತ ಎದುರಾಯಿತು. ಶೆಫಾಲಿ ವರ್ಮಾ ಮೂರನೇ ಬಾಲ್ಗೆ ಎಲ್ಬಿಡಬ್ಲ್ಯುಗೆ ಬಲಿಯಾದರು. ನಂತರ ಬಂದ ಜೆಮಿಕಾ ರೋಡ್ರಿಗಸ್ ಮತ್ತೋರ್ವ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಜೊತೆಗೆ ಉತ್ತಮ ಜೊತೆಯಾಟ ಆಡಿದರು.ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ವನಿತೆಯರ ತಂಡ ಶಥಿ ರಾಣಿ (22), ಸೋಭಾನಾ ಮೊಸ್ಟಾರಿ (23) ಮತ್ತು ಶೋರ್ನಾ ಅಕ್ಟರ್ (28) ಅವರ ರನ್ ಸಹಾಯದಿಂದ ನಿಗದಿತ ಓವರ್ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿತು.
ಈ ಜೋಡಿ ಎರಡನೇ ವಿಕೆಟ್ 21 ರನ್ ಕಲೆ ಹಾಕಿತು. ಈ ವೇಳೆ 11 ರನ್ ಗಳಿಸಿ ಆಡುತ್ತಿದ್ದ ಜೆಮಿಕಾ ವಿಕೆಟ್ ಒಪ್ಪಿಸಿದರು. ನಂತರ ತಂಡವನ್ನು ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ಉಪನಾಯಕಿ ಮಂಧಾನ ಮುನ್ನಡೆಸಿದರು. ನಾಯಕಿ ಮತ್ತು ಉಪನಾಯಕಿ ಸೇರಿಕೊಂಡು 70 ರನ್ ಬೃಹತ್ ಜೊತೆಯಾಟ ಆಡಿದರು. ಇದರಿಂದ ತಂಡ ಗೆಲುವಿನ ಸನಿಹಕ್ಕೆ ತಲುಪಿತು. ಗೆಲುವಿಗೆ 23 ರನ್ ಬಾಕಿ ಇರುವಾಗ ಸ್ಮೃತಿ ಮಂಧಾನ ಸ್ಟಂಪ್ ಔಟ್ಗೆ ಬಲಿಯಾದರು. ಅವರು ಈ ಇನ್ನಿಂಗ್ಸ್ನಲ್ಲಿ 34 ಬಾಲ್ನಲ್ಲಿ 5 ಬೌಂಡರಿಯಿಂದ 38 ರನ್ ಗಳಿಸಿದರು.
ಮಿನ್ನು ಮಣಿ, ಅನುಷಾ ಬಾರೆಡ್ಡಿ ಪಾದಾರ್ಪಣೆ: ಭಾರತವು ಆಲ್ರೌಂಡರ್ ಮಿನ್ನು ಮಣಿ ಮತ್ತು ಎಡಗೈ ಸ್ಪಿನ್ನರ್ ಅನುಷಾ ಬಾರೆಡ್ಡಿ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಂಡಿತು. ಇದು ಇವರ ಚೊಚ್ಚಲ ಪಂದ್ಯವಾಗಿದೆ. ನಾಯಕಿ ಮತ್ತು ಉಪನಾಯಕಿ ಕ್ಯಾಪ್ ಕೊಟ್ಟು ಇಬ್ಬರನ್ನು ತಂಡಕ್ಕೆ ಸ್ವಾಗತಿಸಿದರು. ಆಲ್ರೌಂಡರ್ ಮಿನ್ನು ಮಣಿ ಚೊಚ್ಚಲ ಪಂದ್ಯದಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ವಿಕೆಟ್ ಪಡೆದು ಮಿಂಚಿದರು. ಬಾಂಗ್ಲಾದೇಶ ಬಲಗೈ ಬ್ಯಾಟರ್ ಶಾಥಿ ರಾಣಿ ಅವರ ಕ್ಯಾಪ್ ಕೊಟ್ಟು ಚೊಚ್ಚಲ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಸಿತು.
ಕೊನೆಯಲ್ಲಿ ನಾಯಕಿ ಕೌರ್ ವಿಕೆಟ್ ಕೀಪರ್ ಯಾಸ್ತಿಕಾ ಭಾಟಿಯಾ ಜೊತೆಗೆ ಸೇರಿ ಪಂದ್ಯವನ್ನು ಗೆಲ್ಲಿಸಿದರು. ಕೌರ್ 35 ಬಾಲ್ ಎದುರಿಸಿ ಎರಡು ಸಿಕ್ಸ್ ಮತ್ತು 6 ಬೌಂಡರಿಯಿಂದ 54 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಜೊತೆ ಯಾಸ್ತಿಕಾ ಭಾಟಿಕಾಯಾ 12 ಬಾಲ್ನಲ್ಲಿ 9 ರನ್ ಗಳಿಸಿ ಅಜೇಯಾರಾಗಿ ಉಳಿದರು. ಕೌರ್ ಮತ್ತು ಮಂಧಾನ ಇನ್ನಿಂಗ್ಸ್ ಸಹಾಯದಿಂದ ಭಾರತ 7 ವಿಕೆಟ್ಗಳ ಜಯ ದಾಖಲಿಸಿತು. ಅರ್ಧಶತಕ ಗಳಿಸಿ ಗೆಲುವಿಗೆ ಕಾರಣರಾದ ನಾಯಕಿ ಕೌರ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.