ಉಡುಪಿ: ಇಲ್ಲಿನ ಪೂಂಜಾ ಟವರ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ ಪ್ರಧಾನ ಕಚೇರಿ ಸ್ಥಳಾಂತರ ಕಾರ್ಯಕ್ರಮವು ಜುಲೈ 14 ಶುಕ್ರವಾರದಂದು ಬೆಳಿಗ್ಗೆ 11 ಗಂಟೆಗೆ ಜರುಗಲಿರುವುದು. ನೂತನ ಕಚೇರಿಯು ಇನ್ನು ಮುಂದೆ ಕೋರ್ಟ್ ರೋಡ್ ಗಿರಿಯಾಸ್ ಹತ್ತಿರವಿರುವ ಕಾರ್ತಿಕ್ ಟವರ್ಸ್ ನ ಒಂದನೇ ಮಹಡಿಯಲ್ಲಿ ಕಾರ್ಯ ನಿರ್ವಹಿಸಲಿರುವುದು.
ಕಾರ್ಯಕ್ರಮದ ಉದ್ಘಾಟಕರಾಗಿ ಶಾಸಕ ಯಶ್ ಪಾಲ್ ಸುವರ್ಣ ಭಾಗವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ದ.ಕ.ಜಿ. ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಜೇಶ್ ರಾವ್ ಪಾಂಗಾಳ, ಕ.ರಾ.ಸೌ.ಸಂ. ಸ. ನಿರ್ದೇಶಕ ಮಂಜುನಾಥ್ ಎಸ್.ಕೆ, ಮಣಿಪಾಲ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್, ಸ.ಸಂ. ಸ.ನಿಬಂಧಕ ಅರುಣ ಕುಮಾರ ಎಸ್ ವಿ, ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ ನಾಗರಾಜ್, ಬೋಳ ವ್ಯ.ಸೇ.ಸ.ಸಂ ಅಧ್ಯಕ್ಷ ಸದಾಶಿವ ಶೆಟ್ಟಿ ಬೋಳ, ನಾದಶ್ರೀ ಕೆ.ಕೋ.ಆ ಸೊಸೈಟಿ ಅಧ್ಯಕ್ಷ ಶ್ರೀಧರ ದೇವಾಡಿಗ, ಉ.ಜಿ.ಮರಾಠಿ ಸಮಜ ಸೇವಾ ಸಂಘದ ನಿಕಪೂರ್ವ ಅಧ್ಯಕ್ಷ ಎಸ್.ಅನಂತ್ ನಾಯ್ಕ್, ಸ್ನೇಹಾ ಟ್ಯುಟೋರಿಯಲ್ ಕಾಲೇಜಿನ ಪ್ರಾಶುಂಪಾಲ ಉಮೇಶ್ ಎ ನಾಯ್ಕ್, ಕಾರ್ತಿಕ್ ಟವರ್ಸ್ ಮಾಲಕ ಸದಾಶಿವ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಅಲೆವೂರು ದಿನೇಶ್ ಸಿ ನಾಯ್ಕ್ ತಿಳಿಸಿದ್ದಾರೆ.