ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ಭುಗಿಲೆದ್ದ ಹಿಂಸಾಚಾರ; ಮತಗಟ್ಟೆ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಕೋಲ್ಕತಾ: ಪಂಚಾಯತ್ ಚುನಾವಣೆಗೆ ಮತದಾನ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಉತ್ತರ 24 ಪರಗಣಗಳ ಪಿರ್ಗಾಚಾ ಪಂಚಾಯತ್‌ನಲ್ಲಿ ಶನಿವಾರ ಮುಂಜಾನೆ ಹಿಂಸಾಚಾರ ಪ್ರಾರಂಭವಾಗಿದೆ. ಶುಕ್ರವಾರ ರಾತ್ರಿ ಟಿಎಂಸಿ ಕಾರ್ಯಕರ್ತರ ಥಳಿತದಿಂದಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಕೂಚ್‌ಬಿಹಾರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗುಂಡು ಹಾರಿಸಲಾಗಿದ್ದು, ತೀವ್ರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

44, 45, ನೂರ್ಪುರ್ ಪಂಚಾಯತ್ ನ ಮತಪೆಟ್ಟಿಗೆಗಳನ್ನು ಒಯ್ದು ಮತ ಪತ್ರಗಳನ್ನು ಹಾಳುಮಾಡಲಾಗಿದೆ. ಇಂದು ಮುಂಜಾನೆ ದಿನ್ಹಟಾ ಬ್ಲಾಕ್ ನಂಬರ್ 1 ಮತಗಟ್ಟೆಗೆ ನುಗ್ಗಿದ ಯನ್ನು ದುಷ್ಕರ್ಮಿಗಳು ಮತಪೆಟ್ಟಿಗೆಯನ್ನು ಧ್ವಂಸಗೊಳಿಸಿದ್ದಾರೆ.

ಕೂಚ್ ಬಿಹಾರ್ ಜಿಲ್ಲೆಯ ಮಠಭಂಗ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತನ ಮನೆಯನ್ನು ಟಿಎಂಸಿ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.