ಉಡುಪಿ: ಪೊದಾರ್ ಶಾಲೆಯಲ್ಲಿ ಮಕ್ಕಳ ಸಂಸತ್ತು ಉದ್ಘಾಟನೆ

ಉಡುಪಿ: ಪೊದಾರ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಮಕ್ಕಳ ಸಂಸತ್ತು ಉದ್ಘಾಟನೆ ಕಾರ್ಯಕ್ರ‌ಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪೂರ್ಣಪ್ರಜ್ಞ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ರಾವ್ ಭಾಗವಹಿಸಿ ಮಾತನಾಡಿ,
ಮಕ್ಕಳೇ ಮುಂದಿನ ಶಕ್ತಿ. ಆದ್ದರಿಂದ ಮಕ್ಕಳು ಶಿಸ್ತಿನ ಜೀವನ ನಡೆಸಬೇಕು ಎಂದರು.
ಶಾಲಾ ಪ್ರಾಂಶುಪಾಲರಾದ ಎಂ.ಎಸ್. ಹೀರೇಮಠ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಶಾಲಾನಾಯಕರು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು ಎಂದರು.
ಶಾಲಾ ನಾಯಕನಾಗಿ ಏಳನೇ ತರಗತಿ ವಿದ್ಯಾರ್ಥಿ ದಕ್ಷ್‍ಭಂಡಾರಿ ಹಾಗೂ ಶಾಲಾನಾಯಕಿಯಾಗಿ ದಿಯಾ ಕಾರ್ಣಿಕ್ ಆಯ್ಕೆಯಾದರು.
ಶಿಕ್ಷಕಿ ವೇದಾವತಿ ಪುರೋಹಿತರವರು ಮಕ್ಕಳ ಸಂಸತ್ತಿನ ಮಹತ್ವವನ್ನು ವಿವರಿಸಿದರು. ಅನಂತರ ಮುಖ್ಯ ಅತಿಥಿಗಳು  ಮಕ್ಕಳಿಗೆ ಬಾಡ್ಜ್ ಮತು ಸ್ಯಾಶ್ಸ್ ಗಳನ್ನು ವಿತರಿಸಿದರು. ಶಿಕ್ಷಕಿ ಪೂಜಾ ಅವರು ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ವಿದ್ಯಾರ್ಥಿಗಳಾದ ಹನ್ನಾ ಸ್ವಾಗತಿಸಿ, ಮಾಜೀಮ್ ವಂದಿಸಿದರು. ಆಂಚಲ್ ನಿರೂಪಿಸಿದರು.