ಆನಂದ್ ಫಿಲಂಸ್ ಮತ್ತು ಮಂಗಳೂರು ಬ್ಯಾನರ್ನಡಿಯಲ್ಲಿ ನಿರ್ಮಾಣಗೊಂಡು ಸಂತೋಷ್ ಶೆಟ್ಟಿ ನಿರ್ದೇಶನದ, ರಾಮ್ ಶೆಟ್ಟಿ ಪ್ರಸ್ತುತಪಡಿಸುತ್ತಿರುವ ತುಳು ಚಲನಚಿತ್ರ ‘ಯಾನ್ ಸೂಪರ್ಸ್ಟಾರ್’ ಚಿತ್ರೀಕರಣ ಮತ್ತು ಡಬ್ಬಿಂಗ್ ಪೂರ್ಣಗೊಂಡಿದೆ. ಆಗಸ್ಟ್ನಲ್ಲಿ ಚಿತ್ರ ತೆರೆಗೆ ಬರಲಿದೆ. ಉಡುಪಿ ಸುತ್ತಮುತ್ತ 25 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಜನಪ್ರಿಯ ಧಾರಾವಾಹಿ ‘ಸಿಐಡಿ’ ಖ್ಯಾತಿಯ ದಯಾ ಈ ಚಿತ್ರದಲ್ಲಿ ನಟಿಸಿದ್ದಾರೆ. ದಯಾನಂದ ಶೆಟ್ಟಿ ಜೊತೆಗೆ ಹರೀಶ್ ವಾಸು ಶೆಟ್ಟಿ, ಸಾಯಿ ಬಲ್ಲಾಳ್, ಖ್ಯಾತ ಹಾಸ್ಯ ನಟರಾದ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಮಾನಸಿ ಸುಧೀರ್, ಅಶೋಕ್ ಪಕ್ಕಳ, ಅತಿಶ್ ಶೆಟ್ಟಿ, ಅರುಶ್ ಯು ಪೂಜಾರಿ, ಕುಮಾರಿ ಶ್ರಿಯಾ ಹೆಗ್ಡೆ ಮುಂತಾದವರು ತಾರಾಗಣದಲ್ಲಿದ್ದಾರೆ.
ಸಚಿನ್ ಶೆಟ್ಟಿ ಕುಂಬ್ಳೆ ಸಂಭಾಷಣೆ ಬರೆದಿದ್ದಾರೆ. ಸಂತೋಷ್ ಶೆಟ್ಟಿ ಕಥೆ ಹೆಣೆದಿದ್ದಾರೆ. ಚಿತ್ರಕಥೆ: ಅಂಕಣ ಜೋಶಿ, ಸಂತೋಷ್ ಶೆಟ್ಟಿ, ಸಾಹಿತ್ಯ: ವಿ ಮನೋಹರ್ ಮತ್ತು ಗುರುಕಿರಣ್ . ಹಿನ್ನೆಲೆ ಸಂಗೀತ: ಸಂಜಯ್ ವಾಂಡ್ರೇಕರ್, ಕ್ಯಾಮೆರಾ: ಕೃಷ್ಣರಾಜ್ ಕೋಟ್ಯಾನ್, ಸಾಹಸ: ಆನಂದ ಶೆಟ್ಟಿ, ಕಾರ್ಯಕಾರಿ ನಿರ್ಮಾಪಕ: ಸತೀಶ್ ದುಬೆ, ಸೃಜನಾತ್ಮಕ ನಿರ್ದೇಶಕ: ಕ್ರಿಸ್ಟಾಬೆಲ್ ಡಿಸೋಜಾ ಮತ್ತು ನಿರ್ಮಾಣ ಮುಖ್ಯಸ್ಥ: ಚಂದ್ರಕಾಂತ್ ಭಂಡಾರಿ.
ಚಿತ್ರವು ಸೆನ್ಸಾರ್ ಪಾಸಾಗಿದ್ದು, ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.