ಅತ್ಯಾಧುನಿಕ ತಾಂತ್ರಿಕತೆ ಜೊತೆ ಹೊಸತನದೊಂದಿಗೆ ಐಫೋನ್ 15 ಸರಣಿಯ ಮೊಬೈಲ್ಗಳು ಇದೀಗ ಮಾರುಕಟ್ಟೆಗೆ ಬರಲು ಸಜ್ಜಾಗಿದೆ.
ಹೊಸ ಪೀಳಿಗೆ ಅನುಗುಣವಾಗಿ ಹೊಸತನದ ಬಣ್ಣಗಳನ್ನು ತಮ್ಮ ಪ್ರತಿ ಸರಣಿಯ ಫೋನ್ನಲ್ಲಿ ಆಪಲ್ ಬಿಡುಗಡೆ ಮಾಡುತ್ತಿದೆ. ಅದರ ಅನುಸಾರವಾಗಿ ಇದೀಗ ಐಫೋನ್ 15 ಸರಣಿ ಕೂಡ ನಾಲ್ಕು ಹೊಸ ಬಣ್ಣಗಳಿಂದ ಕೂಡಿರಲಿದೆ
ಹೊಸ ಪೀಳಿಗೆ ಅನುಗುಣವಾಗಿ ಹೊಸತನದ ಬಣ್ಣಗಳನ್ನು ತಮ್ಮ ಪ್ರತಿ ಸರಣಿಯ ಫೋನ್ನಲ್ಲಿ ಆಪಲ್ ಬಿಡುಗಡೆ ಮಾಡುತ್ತಿದೆ. ಅದರ ಅನುಸಾರವಾಗಿ ಇದೀಗ ಐಫೋನ್ 15 ಸರಣಿ ಕೂಡ ನಾಲ್ಕು ಹೊಸ ಬಣ್ಣಗಳಿಂದ ಕೂಡಿರಲಿದೆ ಎಂದು ವರದಿ ಆಗಿದೆ.ಇನ್ನೊಂದೆರಡು ತಿಂಗಳಲ್ಲಿ ಬಿಡುಗಡೆಯಾಗಲಿರುವ ಈ ಫೋನ್ಗಳ ಬಗ್ಗೆ ಐಫೋನ್ ಅಭಿಮಾನಿಗಳು ಕೂಡ ಕಾತರರಾಗಿದ್ದಾರೆ. ಈ ಬಾರಿ ಅವರ ಕಾತರತೆಯನ್ನು ಮತ್ತಷ್ಟು ಹೆಚ್ಚಿಸಲು ಆಪಲ್ ಸಂಸ್ಥೆ ಮುಂದಾಗಿದೆ.
ಐಫೋನ್ 15ರ ಸ್ಯಾಂಡರ್ಡ್ ಬಣ್ಣಗಳ ಆಯ್ಕೆಯೂ ಸಿಲ್ವರ್ (ಬೆಳ್ಳಿಯ ಬಣ್ಣ), ಸ್ಪೇಸ್ ಗ್ರೇ (ಕಂದು ಬಣ್ಣ), ಗೋಲ್ಡ್ (ಬಂಗಾರ) ಮತ್ತು ಹೊಸ ಬಣ್ಣಗಳು ಹೆಚ್ಚುವರಿಯಿಂದ ಕೂಡಿರಲಿದೆ. ಫೆಬ್ರವರಿಯಲ್ಲಿ ವೆಬ್ಸೈಟ್ವೊಂದರ ವರದಿ ಅನುಸಾರ, ಆಪಲ್ ತಿಳಿ ನೀಲಿ ಮತ್ತು ಗುಲಾಬಿ ಬಣ್ಣವನ್ನು ಐಫೋನ್ 15ರಲ್ಲಿ ಪ್ರಯೋಗ ಮಾಡಲಿದೆ ಎನ್ನಲಾಗಿತ್ತು.
ಕ್ರಿಮ್ಸನ್ ಶೇಡ್: ಐಫೋನ್ 15 ಪ್ರೋನಲ್ಲಿ ಗಾಢ ಕೆಂಪು ಬಣ್ಣದಿಂದ ಕೂಡಿರಲಿದೆ. ಇದು ಕ್ರಿಮ್ಸನ್ ಶೇಡ್ನಲ್ಲಿ ಇರಲಿದೆ. ಇದೇ ರೀತಿಯ ಬಣ್ಣವನ್ನ ಗಾಢಾ ನೇರಳೆಯಲ್ಲಿ ಕಳೆದ ವರ್ಷ ಐಫೋನ್ 14 ಬಿಡುಗಡೆ ಆಗಿತ್ತು . ಅದಕ್ಕಿಂತ ಲೈಟ್ ಆದ ಕೆಂಪು ಬಣ್ಣದಲ್ಲಿ ಹೊಸ ಸರಣಿ ಮೊಬೈಲ್ ಇರಲಿದೆ ಎಂದು ತಿಳಿದು ಬಂದಿದೆ. ಇನ್ನು ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಕೂಡ ಫೋನ್ 12 ಮತ್ತು ಐಫೋನ್ 11ರಲ್ಲಿದ್ದ ಹಸಿರು ಬಣ್ಣಕ್ಕೆ ಹೋಲಿಕೆಯಾಗುವಂತೆ ಇರಲಿದೆ ಎನ್ನಲಾಗಿದೆ. ಆದರೆ, ಸಂಸ್ಥೆ ಈ ಬಗ್ಗೆ ಅಧಿಕೃತ ಪಡಿಸಿಲ್ಲ.
ಐಫೋನ್ 15 ಕುರಿತು: ಐಫೋನ್ 15 ಸರಣಿಗಳಲ್ಲಿ ಡೈನಾಮಿಕ್ ಐಲ್ಯಾಂಡ್ ಇರಲಿದೆ. ಐಫೋನ್ 15 ಪ್ರೋ ನಲ್ಲಿ ಎ3 ಬಯೋನಿಕ್ ಚಿಪ್ ಇರಲಿದೆ. ಯುಎಸ್ಬಿ ಟೈಪ್ ಸಿ ಕನೆಕ್ಟರ್ ಹೊಂದಿರಲಿದ್ದು, ಮೊಬೈಲ್ ರೌಂಡ್ ಎಡ್ಜ್ (ಮೊಬೈಲ್ನ ನಾಲ್ಕು ಕೋನಗಳು ಅರ್ಧವೃತ್ತಾಕಾರ)ದಿಂದ ಕೂಡಿರಲಿದೆ. ಐಫೋನ್ 15 ಪ್ರೊ ಮಾಕ್ಸ್ ಜಗತ್ತಿನಲ್ಲಿಯೇ ಅತ್ಯಂತ ತೆಳುವಾದ ಡಿಸ್ಪ್ಲೇ ಹೊಂದಿರಲಿದೆ. ಈ ಸಂಬಂಧ ವರದಿ ಮಾಡಿರುವ ಮಾಶಬ್ಲೆ, ಐಫೋನ್ 15 ಪ್ರೋ ಮಾಕ್ಸ್ ಕೇವಲ 1.55ಎಂಎಂ (0.06 ಇಂಚು) ಬೆಜೆಲ್ ಹೊಂದಿರಲಿದೆ ಎಂದಿದೆ.
ಸೆಪ್ಟೆಂಬರ್ಗೆ ಮಾರುಕಟ್ಟೆಗೆ: ಇನ್ನು ಈ ಐಫೋನ್ 15 ಅಧಿಕೃತ ಬಿಡುಗಡೆ ದಿನಾಂಕವನ್ನು ಸಂಸ್ಥೆ ಘೋಷಣೆ ಮಾಡಿಲ್ಲ. ಆದರೆ, ಈ ವರ್ಷ ಸೆಪ್ಟೆಂಬರ್ನಲ್ಲಿ ಇದು ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಸಂಸ್ಥೆಯ ಉತ್ಪಾದನೆ ವಿಳಂಬದಿಂದ ಇದು ಅಕ್ಟೋಬರ್ಗೆ ಬಿಡುಗಡೆಯಾಗಲಿದೆ ಎಂಬ ವರದಿ ಕೂಡ ಕೇಳಿ ಬಂದಿದೆ. ಐಫೋನ್ 15 ಮಾದರಿಗಳ ವಿವಿಧ ಬಣ್ಣಗಳನ್ನು ಬಿಡುಗಡೆ ಮಾಡುವ ಜೊತೆಗೆ ಟೈಟಾನಿಯಂ ಬಣ್ಣವನ್ನು ನಿಲ್ಲಿಸಲಾಗುವುದು ಎಂದು ತಿಳಿದು ಬಂದಿದೆ.