ಮುಂಗಡ​ ಉಡುಗೊರೆ ನೀಡಿದ ಫ್ಯಾನ್ಸ್ ಕ್ಯಾಪ್ಟನ್ ಕೂಲ್​ ಧೋನಿ ಹುಟ್ಟುಹಬ್ಬಕ್ಕೆ ಹೈದರಾಬಾದ್​ನಲ್ಲಿ ​52 ಅಡಿ ಕಟೌಟ್

ಈ ವಿಶೇಷ ದಿನದಂದು ಧೋನಿಗೆ 42 ವರ್ಷ ತುಂಬಲಿದೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ ಗೆ ಗುಡ್​ ಬೈ ಹೇಳಿರುವ ಮಹಿ ಐಪಿಎಲ್​​​ ನಲ್ಲಿ ಮಾತ್ರ ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಭಾರತ ದೇಶವಲ್ಲದೇ ಇಡೀ ವಿಶ್ವದ ಕ್ರಿಕೆಟ್ ಲೋಕದ ಪ್ರೇಮಿಗಳ ಹೃದಯವನ್ನು ಆಳಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನಾಳೆ ಜುಲೈ 7 ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.ಎಂಎಸ್ ಧೋನಿ ಹುಟ್ಟಹಬ್ಬಕ್ಕೂ ಮೊದಲೇ ಅಭಿಮಾನಿಗಳು ವಿಶೇಷ ಉಡುಗೊರೆ ನೀಡುತ್ತಿದ್ದಾರೆ.

ಹೌದು, ಧೋನಿ ಬ್ಲೂ ಜಿರ್ಸಿಯಲ್ಲಿ ಬ್ಯಾಟ್​ ಹಿಡಿದು ಬರುತ್ತಿರುವ ಬರೋಬ್ಬರಿ 52 ಅಡಿ ಎತ್ತರದ ಕಟೌಟ್​ ನಿರ್ಮಿಸಿದ್ದಾರೆ. ಇದೀಗ ಈ ಕಟೌಟ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೆಂಡ್ ಆಗಿದೆ. ಇದುವರೆಗೆ 12 ಲಕ್ಷಕ್ಕೂ ಹೆಚ್ಚು ಮಂದಿ ಧೋನಿಯ ಈ ಕಟೌಟ್​ ಫೋಟೋವನ್ನು ಅಂತರ್ಜಾಲದಲ್ಲಿ ನೋಡಿದ್ದು, 8 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಲೈಕ್ ಮಾಡಿದ್ದಾರೆ. ಹಾಗು ನಿರಂತರವಾಗಿ ಈ ಫೋಟೋಗೆ ಕಾಮೆಂಟ್ ಮಾಡುವ ಮೂಲಕ ಅಭಿಮಾನಿಗಳು ಧೋನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಹೀಗಿದ್ದರೂ ಧೋನಿ ಮೇಲಿನ ಕ್ರೇಜ್ ಅಭಿಮಾನಿಗಳಲ್ಲಿ ಇಂದಿಗೂ ಕಡಿಮೆಯಾಗಿಲ್ಲ. ಈ ಭಾರಿ ಧೋನಿ ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಉತ್ಸಾಹವಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಹುಟ್ಟುಹಬ್ಬವನ್ನು ಆಚರಿಸಲು ಎಲ್ಲ ತಯಾರಿ ಆರಂಭಿಸಿದ್ದಾರೆ. ಈ ಮಧ್ಯೆ, ಹೈದರಾಬಾದ್‌ನಲ್ಲಿರುವ ಧೋನಿ ಅಭಿಮಾನಿಗಳು ಹುಟ್ಟುಹಬ್ಬಕ್ಕೂ ಮೊದಲು ಮುಂಗಡವಾಗಿ ವಿಶೇಷ ಉಡುಗೊರೆ ನೀಡಿ ಗೌರವಸಲ್ಲಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 2023 ರ 16 ನೇ ಆವೃತ್ತಿಯ ಪ್ರಶಸ್ತಿಯನ್ನು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದಿದೆ. ಇದು ಸಿಎಸ್‌ಕೆ ತಂಡದ 5ನೇ ಟ್ರೋಫಿಯಾಗಿತ್ತು. ಈ ಆವೃತ್ತಿಯಲ್ಲಿ ಧೋನಿ ಯಾವ ಮೈದಾನಕ್ಕೆ ಹೋಗುತ್ತಾರೆ ಅಲ್ಲೆಲ್ಲ ಅಭಿಮಾನಿ ಹೋಗಿ ಬೆಂಬಲ ಕೊಡುತ್ತಿದ್ದರು. ಈ ಕ್ರೇಜ್ ಎಂದೆಂದಿಗೂ ಶಾಶ್ವತ ಎಂಬುದನ್ನು ಸಾರಿ ಸಾರಿ ಹೇಳುತ್ತಿತ್ತು.

ಧೋನಿ ಟೀಂ ಇಂಡಿಯಾ ಪರ ಕ್ರಿಕೆಟ್ ಆಡುತ್ತಿರುವಾಗಲೂ ಸಹಾ ಅಭಿಮಾನಿಗಳಿಗೆ ಧೋನಿ ಎಂಬ ಕ್ರಿಕೆಟ್​ ಹುಚ್ಚು ಹಿಡಿದಿತ್ತು ಎಂದರೇ ತಪ್ಪಲ್ಲ.
ಕಳೆದ ಬಾರಿ ಕೂಡ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಅಭಿಮಾನಿಗಳು ಧೋನಿಯ 41ನೇ ಜನ್ಮದಿನದ ಗೌರವಾರ್ಥವಾಗಿ 41 ಅಡಿ ಎತ್ತರದ ಕಟೌಟ್​ ನಿರ್ಮಿಸಿದ್ದರು. ಈ ಕಟೌಟ್​ ನಲ್ಲಿ ಧೋನಿ 2011ರ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಐತಿಹಾಸಿಕ ಸಿಕ್ಸರ್​ ಬಾರಿಸುವ ಮೂಲಕ ವಿಶ್ವಕಪ್​ ಗೆಲ್ಲಿಸಿಕೊಟ್ಟ ಚಿತ್ರ ಹಾಕಲಾಗಿತ್ತು.

ಧೋನಿಯ ಈ 41 ಅಡಿ ಕಟೌಟ್ ಎಲ್ಲರ ಗಮನ ಸೆಳೆದು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿತ್ತು. ಕೇರಳದಲ್ಲಿ 2018 ರಲ್ಲಿ 35 ಅಡಿ ಎತ್ತರದ ಕಟೌಟ್​ ನಿರ್ಮಿಸಿದ್ದರೆ, ಚೆನ್ನೈನಲ್ಲಿ 30 ಅಡಿ ಎತ್ತರದ ಕಟೌಟ್​ ರೂಪಿಸಿದ್ದರು.