ಮಣಿಪಾಲ: ಗುರುಪೂರ್ಣಿಮೆ ಹಾಗೂ ವನಮಹೋತ್ಸವ ಸಪ್ತಾಹದ ಅಂಗವಾಗಿ ಪ್ರತಿ ವರ್ಷದಂತೆ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಸಂಸ್ಥೆಯ ಆವರಣದಲ್ಲಿ ಸೋಮವಾರದಂದು ಆಸಕ್ತರಿಗೆ ಆಯ್ದ ಔಷಧೀಯ ಸಸ್ಯಗಳಾದ ಪಲಾಶ, ದಾಲ್ಚಿನಿ, ಕಹಿಬೇವು, ಮಾವು, ಪುನರ್ಪುಳಿ, ಲಕ್ಮೀತರು, ರಕ್ತಚಂದನ, ನೆಲ್ಲಿ, ಸೀತಾಫಲ, ಬಿಲ್ವ, ಹುಣಸೆ, ಬೇಂಗ (ಹೊನ್ನೆ) ಮತ್ತು ಇತರ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಪ್ರಾಂಶುಪಾಲರಾದ ಡಾ.ಸತ್ಯನಾರಾಯಣ ಬಿ, ಗಿಡ ವಿತರಿಸುವುದರ ಮೂಲಕ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಯೋಗೀಶ್ ಶೆಟ್ಟಿ, ದ್ರವ್ಯಗುಣ ವಿಭಾಗದ ಡಾ.ಚಂದ್ರಕಾಂತ್ ಭಟ್, ಡಾ.ಆರ್ಚನಾ ಕಲ್ಲೂರಾಯ ಮತ್ತು ಎಲ್ಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುಮಾರು ಸಾವಿರಕ್ಕೂ ಹೆಚ್ಚು ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.