ನವದೆಹಲಿ: ನಿಗದಿತ ಸಮಯದಲ್ಲಿ 1-1 ರಿಂದ ಪಂದ್ಯ ಮುಕ್ತಾಯಗೊಂಡ ಬಳಿಕ ಪೆನಾಲ್ಟಿ ಶೂಟ್ ನಲ್ಲಿ ಭಾರತ ಫುಟ್ ಬಾಲ ತಂಡವು 5-4 ಅಂತರದಿಂದ ಕುವೈಟ್ ತಂಡವನ್ನು ಸೋಲಿಸಿ ದಾಖಲೆಯ 9 ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತ ಮತ್ತು ಕುವೈಟ್ ನ ಸಮಬಲದ ಸೆಣಸಾಟದಲ್ಲಿ ಪಂದ್ಯದ ಕೊನೆಯಲ್ಲಿ ಇತ್ತಂಡಗಳು ಸಮಬಲದ ಸ್ಕೋರ್ ಗಳಿಸಿದ್ದವು.
ಪೆನಾಲ್ಟಿ ಶೂಟೌಟ್ನಲ್ಲಿ, ಉದಾಂತ ಸಿಂಗ್ ಭಾರತದ ಒಂದು ಪೆನಾಲ್ಟಿಯನ್ನು ತಪ್ಪಿಸಿಕೊಂಡರು ಮತ್ತು ಅಬ್ದುಲ್ಲಾ ಕುವೈಟ್ ಗೆ ಒಂದು ಅಂಕ ಗಳಿಸಿಕೊಡುವಲ್ಲಿ ಯಶಸ್ವಿಯಾದರು. ಕೊನೆ ಕ್ಷಣದಲ್ಲಿ ಗುರ್ಪ್ರೀತ್ ಸಿಂಗ್ ಸಂಧು ಅವರು ಹಾಜಿಯಾ ಅವರಿಂದ ಪೆನಾಲ್ಟಿ ಗೋಲ್ ಅನ್ನು ತಪ್ಪಿಸಿ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡರು.
ಭಾರತವು 9 ನೇ ಬಾರಿಗೆ SAFF ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದು ದಾಖಲೆ ನಿರ್ಮಿಸಿದೆ. ಈ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ದೇಶದ ಗಣ್ಯರು ತಂಡದ ಗೆಲುವಿಗಾಗಿ ಅಭಿನಂದನೆ ಸಲ್ಲಿಸಿದ್ದಾರೆ.