ನವದೆಹಲಿ:ಯಾವುದೇ ಮೆಸೇಜ್ಗಳು ಬರದೇ ಟ್ವಿಟರ್ ಖಾತೆದಾರರು ಕಿರಿಕಿರಿ ಅನುಭವಿಸಿದರು. ಯಾವುದೇ ಸಂದೇಶಗಳು ಟ್ವಿಟರ್ ಪರದೆ ಮೇಲೆ ಕಾಣಿಸದೇ ದಿಕ್ಕು ತೋಚದಂತಹ ಪರಿಸ್ಥಿತಿ ಕೂಡಾ ಎದುರಿಸಿದರು.
ವಿಶ್ವದ ಅತ್ಯಂತ ಜನಪ್ರಿಯ ಮೈಕ್ರೋ – ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಶನಿವಾರ ತನ್ನ ಕಾರ್ಯವನ್ನು ನಿಲ್ಲಿಸಿತ್ತು.
ಮೈಕ್ರೋ – ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ವಿಶ್ವಾದ್ಯಂತ ಸಮಸ್ಯೆಗೆ ಒಳಗಾಗಿತ್ತು. ಟ್ವಿಟರ್ ಗ್ರಾಹಕರು ಟ್ವಿಟರ್ ಸೇವೆಯಲ್ಲಿನ ಅಡೆತಡೆಯಿಂದ ಭಾರಿ ಸಂಕಷ್ಟಕ್ಕೆ ಒಳಗಾದರು.
ಇದು ನಮ್ಮ- ನಿಮ್ಮ ಸಮಸ್ಯೆ ಮಾತ್ರವಲ್ಲ ಜಾಗತಿಕವಾಗಿ ಕಂಡು ಬಂದ ಸಮಸ್ಯೆ ಎಂದು ನಂತರ ತಿಳಿದು ಬಂದಿದೆ. ಟ್ವೀಟ್ ಅನ್ನು ವೀಕ್ಷಿಸಲು ಅಥವಾ ಪೋಸ್ಟ್ ಮಾಡಲು ಪ್ರಯತ್ನಿಸಿದಾಗ ಈ ಸಮಸ್ಯೆ ಅರಿವಿಗೆ ಬಂದಿದೆ. ಯಾವುದೇ ಸಂದೇಶ ಟ್ವಿಟರ್ ಪರದೇ ಮೇಲೆ ಕಾಣಿಸಲಿಲ್ಲ, ಹಾಗೂ ಪೋಸ್ಟ್ ಕೂಡಾ ಮಾಡಲು ಆಗದೇ ಪರದಾಟ ನಡೆಸಿದರು. ಅಲ್ಲದೇ ರಿಫ್ರೆಸ್ ಸಹ ಮಾಡಲು ಆಗದೇ ಇನ್ ಕನ್ವಿನೆನ್ಸ್ ಎಂಬ ಸಂದೇಶವನ್ನು ಪಡೆದುಕೊಂಡಿದ್ದಾರೆ.
ಔಟ್ಟೇಜ್ ಮಾನಿಟರ್ ವೆಬ್‌ಸೈಟ್ ‘ಡೌನ್ ಡಿಟೆಕ್ಟರ್’ ಟ್ವಿಟರ್ ನಲ್ಲಿ ಆದ ಸಮಸ್ಯೆ ಬಗ್ಗೆ ಸುದ್ದಿ ಮಾಡಿದೆ. ಅವರು ಹೇಳುವ ಪ್ರಕಾರ , ಖಾತೆದಾರರು ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ ವರದಿ ಮಾಡಿದ್ದಾರೆ. ಸುಮಾರು 4000 ಸಾವಿರ ಮಂದಿ ಈ ಬಗ್ಗೆ ದೂರು ನೀಡಿದ್ದಾರೆ ಎಂದು ವರದಿ ಮಾಡಿದೆ.
ಖಾತೆದಾರರೊಬ್ಬರು ಸಮಸ್ಯೆ ಬಗ್ಗೆ ಅರಿಯಲು ಟ್ವಿಟರ್ ಓಪನ್ ಮಾಡಿದಾಗ, ಟ್ವಿಟರ್ ಖಾತೆ ಕೆಲಸ ಮಾಡಲಿಲ್ಲ #TwitterDown” ಎಂದು ಬೇರೆ ಬೇರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಎಲಾನ್ ಮಸ್ಕ್ ಇತ್ತೀಚೆಗೆ ಟ್ವಿಟರ್ ಖರೀದಿಸಿದ್ದರು. ಇದಾದ ಬಳಿಕ ಟ್ವಿಟರ್ನ ಸಂಸ್ಥಾಪಕರು, ಅದರ ಭಾರತೀಯ ಮೂಲದ ಸಿಇಒ ಸೇರಿದಂತೆ ಎಲ್ಲರೂ ಟ್ವಿಟರ್ ತೊರೆದಿದ್ದರು. ಮಸ್ಕ್ ತೆಕ್ಕೆಗೆ ಬರುತ್ತಿದ್ದಂತೆ ಟ್ವಿಟರ್ನಲ್ಲಿ ಭಾರಿ ಬದಲಾವಣೆ ಮಾಡಲಾಗಿತ್ತು. ಇತ್ತೀಚೆಗಷ್ಟೇ ಟ್ವಿಟರ್ಗೆ ಹೊಸ ಸಿಇಒ ಕೂಡಾ ನೇಮಕಗೊಂಡಿದ್ದಾರೆ.
ಬಳಕೆದಾರರು ಈ ಬಗ್ಗೆ ಹಲವು ಕಾಮೆಂಟ್ ಗಳನ್ನು ಮಾಡಿದ್ದಾರೆ: “ಟ್ವಿಟರ್ ಡೌನ್ ಆಗಿದೆಯೇ? ಯಾರಾದರೂ ಅದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಯೇ? ಕಾಮೆಂಟ್‌ಗಳ ವಿಭಾಗವನ್ನು ತೆರೆಯಲು ಸಾಧ್ಯವಾಗುತ್ತಿಲ್ಲ” ಎಂಬ ಸಂದೇಶಗಳನ್ನು ಬೇರೆ ಬೇರೆ ಸಂದೇಶ ವಾಹಕಗಳ ಮೂಲಕ ತಮಗೆ ಆದ ಸಮಸ್ಯೆಯನ್ನು ವಿವರಿಸುತ್ತಿದ್ದಾರೆ.ಒಟ್ಟಿನಲ್ಲಿ ಟ್ವಿಟರ್ ಹಲವು ಗಂಟೆಗಳ ಕಾಲ ತನ್ ಕೆಲಸವನ್ನು ನಿಲ್ಲಿಸಿತ್ತು. ಇದರಿಂದಾಗಿ ವಿಶ್ವಾದ್ಯಂತ ಕೋಟ್ಯಂತರ ಬಳಕೆದಾರರು ಸಂಕಷ್ಟ ಎದುರಿಸಿದ್ದಂತೂ ಸುಳ್ಳಲ್ಲ.”ಟ್ವಿಟರ್ ಇಂಜಿನಿಯರ್‌ಗಳು ಈ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಇನ್ನೊಬ್ಬ ಬಳಕೆದಾರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ ಎಂದು ಔಟ್ಟೇಜ್ ಮಾನಿಟರ್ ವೆಬ್‌ಸೈಟ್ ವರದಿ ಮಾಡಿದೆ.