ಫಾಸ್ಟ್ ಫುಡ್ ಸೇವಿಸಿದ ಇಬ್ಬರು ಮಕ್ಕಳ ಸಾವು

ಹರಿಯಾಣ: ಫಾಸ್ಟ್ ಫುಡ್ ಇಬ್ಬರು ಮಕ್ಕಳ ಪ್ರಾಣವನ್ನೇ ತೆಗೆದ ಘಟನೆ ಹರಿಯಾಣದ ಸೋನಿಪತ್‌ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ನೂಡಲ್ಸ್, ಪರೋಟಾ ತಿಂದ ಮೂವರು ಮಕ್ಕಳ ಆರೋಗ್ಯ ಹದಗೆಟ್ಟಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು ಮತ್ತೊಂದು ಮಗುವಿನ ಸ್ಥಿತಿಯೂ ಗಂಭೀರವಾಗಿದೆ.

ಭೂಪೇಂದ್ರ ಎಂಬುವವರ ಕುಟುಂಬದವರು ರಾತ್ರಿ ಪರೋಟಾ ಮತ್ತು ನೂಡಲ್ಸ್ ತಿಂದಿದ್ದಾರೆ. ಆದರೆ ರಾತ್ರಿ ಒಂದು ಗಂಟೆ ಸುಮಾರಿಗೆ ಭೂಪೇಂದ್ರ ಅವರ ಮೂವರು ಮಕ್ಕಳ ಸ್ಥಿತಿ ಹದಗೆಟ್ಟಿದೆ. ನಂತರ ಮೂವರನ್ನೂ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಗಂಭೀರ ಸ್ಥಿತಿ ಕಂಡು ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೇಮಾ (7) ಮತ್ತು ಬಾಕ ತರುಣ್ (5) ಎನ್ನಲಾಗಿದೆ. ಇನ್ನೂ 8 ವರ್ಷದ ಮಗ ಪ್ರವೇಶ್ ಚಿಕಿತ್ಸೆ ಇನ್ನೂ ಮುಂದುವರಿದಿದೆ ಎಂದು ವರದಿ ತಿಳಿಸಿದೆ.

ಕುಟುಂಬ ಸದಸ್ಯರ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.