ಮಂಗಳೂರು: ಜೂ. 26: ಯುವತಯೊಬ್ಬಳ ಜತೆಗೆ ವ್ಯಕ್ತಿಯೋರ್ವ ಪ್ರೇಮ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಠಾಣಾ ಪೊಲೀಸರು ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಈ ವ್ಯಕ್ತಿ ಯುವತಿಯೋರ್ವಳ ಜತೆ ನಗ್ನವಾಗಿ ಪ್ರೇಮ ಸಲ್ಲಾಪವಾಡುವ ವೀಡಿಯೋ ವ್ಯಾಟ್ಸ್ ಅಪ್ ಮೂಲಕ ಹರಿದಾಡುತ್ತಿತ್ತು. ಈ ಬಗ್ಗೆ ಸ್ಥಳೀಯ ಸಂಘಟನೆ ನೀಡಿದ ದೂರಿನಂತೆ ಪೊಲೀಸರು ಕೆಲವೇ ಕ್ಷಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಬಂಟ್ವಾಳ ಪುರಸಭಾ ವ್ಯಾಪ್ತಿಯ ಲೊರೆಟ್ಟು ಟಿಪ್ಪು ನಗರ ನಿವಾಸಿ ಮೋನು ಯಾನೆ ರೆಹಮನ್ ಮೀನು ವ್ಯಾಪಾರಿ ಯಾಗಿದ್ದು, ಎರಡು ಮದುವೆಯಾಗಿ 9 ಮಂದಿ ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.