ನವದೆಹಲಿ: ಈಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಟಗಾರರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಗಾಯಗೊಂಡು ಕಳೆದ ನವೆಂಬರ್ನಿಂದ ಕ್ರಿಕೆಟ್ನಿಂದ ದೂರವುಳಿದಿರುವ ಬೂಮ್ರಾ, ಐಪಿಎಲ್ನಲ್ಲಿ ಇಂಜ್ಯುರಿಯಾದ ಕೆಎಲ್ ರಾಹುಲ್ ಏಷ್ಯಾ ಕಪ್ ವೇಳೆಗೆ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಜಸ್ಪ್ರೀತ್ ಬೂಮ್ರಾ ಗಾಯಗೊಂಡಿದ್ದು, ತಂಡಕ್ಕೆ ಹಿನ್ನಡೆ ಉಂಟಾಗಿದೆ.
ಏಷ್ಯಾ ಕಪ್ ಮೂಲಕ ಗಾಯಾಳುಗಳಾದ ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬೂಮ್ರಾ ಭಾರತ ಕ್ರಿಕೆಟ್ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.
.ರಾಹುಲ್ ಈಗಾಗಲೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಿದ್ದು, ಅಗತ್ಯ ತಯಾರಿ ನಡೆಸುತ್ತಿದ್ದಾರೆ. ಬೆವರಿಳಿಸುತ್ತಿರುವ ಆರಂಭಿಕ ಆಟಗಾರ ಏಷ್ಯಾಕಪ್ಗೆ ಸ್ಥಾನ ಪಡೆಯಲು ಸಜ್ಜಾಗಿದ್ದಾರೆ. ಇದೇ ವೇಳೆ ದೀರ್ಘ ಕಾಲದಿಂದ ತಂಡದಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಕೂಡ ಏಷ್ಯಾಕಪ್ಗೆ ಮರಳುವ ಸುಳಿವು ನೀಡಿದ್ದಾರೆ.
ಗಾಯಗೊಂಡಿರುವ ಶ್ರೇಯಸ್ ಅಯ್ಯರ್, ರಿಷಬ್ ಪಂತ್
ಕೆಎಲ್ ರಾಹುಲ್ ತಮ್ಮ ಫಿಟ್ನೆಸ್ನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಾವು ಕ್ರಿಕೆಟ್ಗೆ ಮರಳಲು ಸಜ್ಜಾಗಿದ್ದು ಏಷ್ಯಾಕಪ್ನಲ್ಲಿ ತಂಡವನ್ನು ಸೇರಲು ಸಂಪೂರ್ಣವಾಗಿ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಐಪಿಎಲ್ ಸಮಯದಲ್ಲಿ ಫೀಲ್ಡಿಂಗ್ ಮಾಡುವಾಗ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಗಾಯಗೊಂಡಿದ್ದರು. ಅಂದಿನಿಂದ ಅವರು ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳದ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದ ಹೊರ ಬಿದ್ದಿದ್ದರು. ಇದಲ್ಲದೇ ಮುಂದಿನ ತಿಂಗಳಿಂದ ಆರಂಭವಾಗುವ ವೆಸ್ಟ್ ಇಂಡೀಸ್ ಪ್ರವಾಸದಿಂದಲೂ ರಾಹುಲ್ ಕೈಬಿಡಲಾಗಿದೆ. ಪ್ರಸ್ತುತ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ಭಾರತ, ಐರ್ಲೆಂಡ್ ನಡುವಿನ ಎಲ್ಲ ಮೂರು ಪಂದ್ಯಗಳು ಐರ್ಲೆಂಡ್ ರಾಜಧಾನಿ ಡಬ್ಲಿನ್ನ ಮಲಾಹೈಡ್ನಲ್ಲಿ ಆಗಸ್ಟ್ 18 ರಿಂದ 23ರ ವರೆಗೆ ನಡೆಯಲಿವೆ. ಜುಲೈ ಮತ್ತು ಆಗಸ್ಟ್ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಭಾರತ ತಂಡ ಐರ್ಲೆಂಡ್ಗೆ ಪ್ರವಾಸ ಕೈಗೊಳ್ಳಲಿದೆ.
ಪಂದ್ಯಗಳ ವಿವರ: 18 ಆಗಸ್ಟ್ : ಮೊದಲ ಪಂದ್ಯ – ಮಲಾಹೈಡ್, 20 ಆಗಸ್ಟ್ : ಎರಡನೇ ಪಂದ್ಯ – ಮಲಾಹೈಡ್, 23 ಆಗಸ್ಟ್ : ಮೂರನೇ ಪಂದ್ಯ – ಮಲಾಹೈಡ್
ಜಸ್ಪ್ರೀತ್ ಬೂಮ್ರಾ ಫಿಟ್: ಇನ್ನು ಕಳೆದ 6 ತಿಂಗಳಿಗೂ ಹೆಚ್ಚು ಕಾಲದಿಂದ ಕ್ರಿಕೆಟ್ನಿಂದ ಹೊರಗುಳಿದಿರುವ ಭಾರತ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಕೂಡ ಏಷ್ಯಾಕಪ್ಗೆ ಟೀಂ ಇಂಡಿಯಾವನ್ನು ಸೇರುವ ಸಾಧ್ಯತೆ ಹೆಚ್ಚಿದೆ.
ಐರ್ಲೆಂಡ್ ವಿರುದ್ಧದ ಸರಣಿ ಮೂಲಕ ತಂಡಕ್ಕೆ ಮರಳಲಿದ್ದಾರೆ ಎಂದು ಈ ಹಿಂದೆ ವರದಿಗಳು ಬಂದಿದ್ದವು. ಆದರೆ, ಈಗ ಬೂಮ್ರಾ ಮತ್ತು ರಾಹುಲ್ ಏಷ್ಯಾ ಕಪ್ ಮೂಲಕ ತಂಡಕ್ಕೆ ಎಂಟ್ರಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ, ಇನ್ನಿಬ್ಬರು ಗಾಯಾಳು ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಅವರ ವಾಪಸಾತಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಖಚಿತವಾದ ಮಾಹಿತಿ ಬಂದಿಲ್ಲ. ಇದರಿಂದಾಗಿ ಅಯ್ಯರ್ ಮತ್ತು ಪಂತ್ ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು ಎಂದು ಹೇಳಲಾಗಿದೆ.
ಐರ್ಲೆಂಡ್ ಪ್ರವಾಸ ನಿಗದಿ: ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಆಗಸ್ಟ್ನಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಮೂರು ಪಂದ್ಯಗಳ T20 ಸರಣಿಯನ್ನು ಆಡಲಿದೆ ಎಂದು ಕ್ರಿಕೆಟ್ ಐರ್ಲೆಂಡ್ ದೃಢಪಡಿಸಿರುವುದಾಗಿ ಐಸಿಸಿ ಮಂಗಳವಾರ ಪ್ರಕಟಿಸಿದೆ. ಸರಣಿಯ ವೇಳಾಪಟ್ಟಿಯನ್ನೂ ಅಂತಿಮಗೊಳಿಸಲಾಗಿದೆ.