ಲೈಬ್ರರಿ ಟ್ರೈನಿ, ಕ್ಲರ್ಕ್ ಟ್ರೈನಿ ಸೇರಿದಂತೆ ಒಟ್ಟು ನಾಲ್ಕು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಲೈಬ್ರರಿ ಸೈನ್ಸ್ನಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕವಾಗಿದೆ.
ಬೆಂಗಳೂರಿನಲ್ಲಿರುವ ಟಾಟಾ ಇನ್ಸುಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್)ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಲೈಬ್ರರಿ ಸೈನ್ಸ್ನಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಹುದ್ದೆ ವಿವರ: ಲೈಬ್ರರಿ ಟ್ರೈನಿ, ಕ್ಲರ್ಕ್ ಟ್ರೈನಿ, ಇಂಜಿನಿಯರ್ ಟ್ರೈನಿ, ಟೆಪರೊರಿ ಸೈಂಟಿಫಿಕ್ ಅಸಿಸ್ಟೆಂಟ್ ಬಿ ಈ ಎಲ್ಲ ಹುದ್ದೆಗಳಿಗೆ ತಲಾ ಒಬ್ಬ ಅಭ್ಯರ್ಥಿಗಳ ನೇಮಕಾತಿ ನಡೆಸಲಾಗುವುದು.
ವಿದ್ಯಾರ್ಹತೆ: ಲೈಬ್ರರಿ ಟ್ರೈನಿ: ಬಿಎಸ್ಸಿ ಮತ್ತು ಬಿಲಿಬ್ ಪದವಿ ಅಥವಾ ಎಂಲಿಬ್ ಪದವಿ – 22 ಸಾವಿರ ರೂ ಮಾಸಿಕ ವೇತನ
ಕ್ಲರ್ಕ್ ಟ್ರೈನಿ: ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ – 22 ಸಾವಿರ ರೂ ಮಾಸಿಕ ವೇತನ
ಇಂಜಿನಿಯರ್ ಟ್ರೈನಿ: ಐಟಿ ಅಥವಾ ಐಎಸ್ ಅಥವಾ ಟೆಲಿ ಕಮ್ಯೂನಿಕೇಷನ್ನಲ್ಲಿ ಬಿಟೆಕ್, ಬಿಇ ಪದವಿ – 35 ಸಾವಿರ ಮಾಸಿಕ ವೇತನ
ಟೆಂಪರರಿ ಸೈಂಟಿಫಿಕ್ ಅಸಿಸ್ಟೆಂಟ್: ಲೈಬ್ರಿರಿ ಸೈನ್ಸ್ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ- 55,600 ರೂ ಮಾಸಿಕ ವೇತನ
ವಿಶೇಷ ಸೂಚನೆ: ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕವಾಗಿದ್ದು, ಒಂದು ವರ್ಷದ ಗುತ್ತಿಗೆ ಅವಧಿಗೆ ನೇಮಕ ಮಾಡಲಾಗುತ್ತಿದೆ.
ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕಂಪ್ಯೂಟರ್ ಜ್ಞಾನ ಜೊತೆಗೆ ಲಟೆಕ್ಸ್ ಟೈಪಿಂಗ್ ಕೌಶಲ್ಯವನ್ನು ಹೊಂದಿರಬೇಕು. ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 28 ವರ್ಷ ಆಗಿದೆ. ಟಿಐಆರ್ಎಫ್ ನಿಯಮ ಅನುಸಾರ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿಗಳನ್ನು ಸಲ್ಲಿಸುವ ವಿಳಾಸ : ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಸೆಂಟರ್ ಫಾರ್ ಅಪ್ಲಿಕೇಬಲ್ ಮ್ಯಾಥಮೆಟಿಕ್ಸ್, ಪೋಸ್ಟ್ ಬಾಕ್ಸ್ ನಂ 6503, ಜಿಕೆವಿಕೆ ಪೋಸ್ಟ್ ಆಫೀಸ್, ಶಾರಾದಾ ನಗರ್, ಚಿಕ್ಕಬೊಮ್ಮಸಂದ್ರ, ಬೆಂಗಳೂರು 560065. ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಈ tifr.res.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.
ಆಯ್ಕೆ ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಟ್ರೇಡ್ ಪರೀಕ್ಷೆ ಅಥವಾ ಕೌಶಲ್ಯ ಪರೀಕ್ಷೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಇದಾದ ಬಳಿಕ ಅಪ್ಲಿಕೇಷನ್ ಪ್ರಿಂಟ್ ಪಡೆದು ಶೈಕ್ಷಣಿಕ ವಿದ್ಯಾರ್ಹತೆ, ಅನುಭವ ಸೇರಿದಂತೆ ಇನ್ನಿತರ ಅಗತ್ಯ ದಾಖಲಾತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಿದೆ. ಆನ್ಲೈನ್ ಅರ್ಜಿ ಸಲ್ಲಿಕೆಗೆ 10 ಜುಲೈ ಕಡೆಯ ದಿನವಾದರೆ, ದಾಖಲಾತಿಗಳನ್ನು ಆಫ್ಲೈನ್ ಮೂಲಕ ಕಳುಹಿಸಲು ಜುಲೈ 15 ಕಡೆಯ ದಿನವಾಗಿದೆ.