ಮಣಿಪಾಲ: ಆಕಸ್ಮಿಕವಾಗಿ ಟೆರೇಸ್ ಮೇಲಿಂದ ಬಿದ್ದು ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಮೃತ ಬಾಲಕನನ್ನು ಧಾರವಾಡ ನಿವಾಸಿ ನಾಮದೇವ ಎಂಬವರ ಪುತ್ರ ಆಯುಷ್ (8) ಎಂದು ಗುರುತಿಸಲಾಗಿದೆ.
ಶಸ್ತ್ರಚಿಕಿತ್ಸೆಗಾಗಿ ನಗರಕ್ಕೆ ಬಂದಿಳಿದಿದ್ದ ಬಾಲಕ ಮತ್ತು ಆತನ ತಂದೆ ಇಲ್ಲಿನ ಬಡಗುಬೆಟ್ಟು ಗ್ರಾಮದ ದಶರಥನಗರದಲ್ಲಿರು ಸಂಬಂಧಿಯೊಬ್ಬರ ಮನೆಯಲ್ಲಿ ವಾಸವಾಗಿದ್ದರು. ಜೂನ್ 25 ರಂದು, ಆಯುಷ್ ಇತರ ಮಕ್ಕಳೊಂದಿಗೆ ಟೆರೇಸ್ ಮೇಲೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಬಾಲಕನ ತಲೆಗೆ ತೀವ್ರ ಏಟಾಗಿತ್ತು. ಚಿಕಿತ್ಸೆಗಾಗಿ ಆತನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದ ಆಯುಷ್ ಜೂನ್ 26 ರಂದು ಸಾವನ್ನಪ್ಪಿದ್ದಾನೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.