ಎಸ್.ಡಿ.ಎಂ.ಸಿ ವತಿಯಿಂದ ಶಿಕ್ಷಕಿಯರಿಗೆ ಸನ್ಮಾನ

ಕಾರ್ಕಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ ಇಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಶಿಕ್ಷಕಿಯರಾದ ಶ್ಯಾಮಲಾ ಮತ್ತು ಸತ್ಯವತಿಯವರನ್ನು ಶಾಲಾ ಎಸ್.ಡಿ.ಎಂ.ಸಿ ವತಿಯಿಂದ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷೆ ಶಾಮಲಾ ಪ್ರಭು ವಹಿಸಿದ್ದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತ್ಯಾನಂದ ನಾಯಕ್ ಸ್ವಾಗತಿಸಿ ಮಾತನಾಡಿ, ಶಿಕ್ಷಕಿಯರ ಸೇವೆ , ಗ್ರಾಮಸ್ಥರೊಂದಿಗಿನ ಒಡನಾಟ, ಶಾಲೆಯ ಮೇಲೆ ಅವರಿಗಿರುವ ಅಭಿಮಾನದ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಸಿ ಆರ್ ಪಿ ಪ್ರದೀಪ್ ಕುಮಾರ್, ಶಾಲಾ ಹಿತೈಷಿ ಹರೀಶ್ ಹೆಗ್ಡೆ, ಮುಖ್ಯ ಶಿಕ್ಷಕಿ ಸರಸ್ವತಿ, ಪಂಚಾಯತ್ ಸದಸ್ಯರಾದ ಗಂಗಾಧರ್ ಪ್ರಭು, ಇಸ್ಮಾಯಿಲ್ ಆತ್ರಾಡಿ, ಹಿರಿಯಡ್ಕ ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹದಾಸ್ ಆಚಾರ್ಯ, ಅಬ್ದುಲ್ ರಹಿಮಾನ್, ಅಶೋಕ್ ಕಾಂಚನ್
ಶಿಕ್ಷಕಿಯರಾದ ಸುಹಾಸಿನಿ, ಜ್ಯೋತಿ, ಶಬನಾ ಪರ್ವೀನ್, ವಿಮಲಾ , ಪ್ರತಿಮಾ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಕೀರ್ತಿ, ಜಲ್ಸಿನಾ, ಅಡುಗೆ ಸಿಬ್ಬಂದಿ, ಗಳಾದ ರಾಜೇಶ್ವರಿ, ಗಾಯತ್ರಿ, ಸದಸ್ಯರಾದ ಜಗದೀಶ್ ಕಾಂಚನ್, ದಿನೇಶ್ ಕಾಂಚನ್, ಸುಲೈಮಾನ್, ಇರ್ಫಾನ್, ವಸುಮತಿ ಶೆಟ್ಟಿಗಾರ್,ಕುರೇಶಿ, ಮೈಮುನಾ, ಮಾಲತಿ, ದಯಾನಂದ ನಾಯ್ಕ್, ರೇಖಾ, ಮಲ್ಲಿಕಾ, ಬೇಬಿ, ಸುಮಿತ್ರಾ, ಮಸ್ಮುನ್ನಿಸ ಸುಲೋಚನಾ, ಶಶಿಕಲಾ, ಶಬೀನ, ಫಾತಿಮಾ ಮತ್ತು ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು, ಮಕ್ಕಳ ಪೋಷಕರು ಭಾಗವಹಿಸಿದ್ದರು.