ಕಿರಣ್ ರಾಜ್ ಕೆ ಚೊಚ್ಚಲ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರವು ಒಂದು ವರ್ಷ ಪೂರೈಸಿದ್ದು, ಚಾರ್ಲಿ ಪಾತ್ರದಲ್ಲಿ ಮಿಂಚಿದ್ದ ಲ್ಯಾಬ್ರಡಾರ್ ರಿಟ್ರೀವರ್ ‘ಚಾರ್ಲಿ’ ಗೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2023 ನಲ್ಲಿ ಸ್ಪೆಷಲ್ ಅಪಿಯರೆಂಸ್ ಪ್ರಶಸ್ತಿ ಲಭಿಸಿದೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ರಕ್ಷಿತ್, ” ಒಂದು ವರ್ಷ ಕಳೆದಿದೆ, ಮತ್ತು ನನ್ನ ಸಹನಟಿ ಹೃದಯಗಳನ್ನು ಗೆಲ್ಲುವುದನ್ನು ಇನ್ನೂ ಕೂಡಾ ಮುಂದುವರೆಸಿದ್ದಾಳೆ. ನಮ್ಮ ಪ್ರೀತಿಯ ಪುಟ್ಟ ಚಾರ್ಲಿ ಚಿತ್ತಾರ ಸ್ಟಾರ್ ಅವಾರ್ಡ್ಸ್ 2023 ನಲ್ಲಿ ಸ್ಪೆಷಲ್ ಅಪಿಯರೆಂಸ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾಳೆ” ಎಂದಿದ್ದಾರೆ.
Its been over a year to 777 Charlie, and my co-star still continues to melt hearts ☺️
Our dear little Charlie receives the special appearance award at the Chittara Star Awards – 2023 ♥️ pic.twitter.com/iSCY1woqsm
— Rakshit Shetty (@rakshitshetty) June 25, 2023
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶ್ವಾನವೊಂದು ಜನರ ಹೃದಯ ಮಾತ್ರವಲ್ಲದೆ ಪ್ರಶಸ್ತಿಯನ್ನೂ ಗೆದ್ದಿದೆ.