ಉಡುಪಿ, ಜೂನ್ 27: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಷಿಯೇಷನ್ ಮೈಸೂರಿನಲ್ಲಿ ಜೂನ್ 21 ರಿಂದ 23 ರ ವರೆಗೆ ಆಯೋಜಿಸಿದ ರಾಜ್ಯಮಟ್ಟದ ಓಪನ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ಶಿಪ್ 2019 ರಲ್ಲಿ, 7 ರಿಂದ 9 ವರ್ಷದೊಳಗಿನವರ ಬಾಲಕಿಯರ ವಿಬಾಗದಲ್ಲಿ ಉಡುಪಿಯ ಹಿಮರ್ಷ, ಒಂದು ಸ್ವರ್ಣ, ಒಂದು ಬೆಳ್ಳಿ, ಒಂದು ಕಂಚು ಪದಕ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ಸ್ಪರ್ದೆಯಲ್ಲಿ, 500 ಮೀಟರ್ ರೋಡ್ ರೇಸ್ ನಲ್ಲಿ ಚಿನ್ನ, 500 ಮೀ ರಿಂಕ್ ರೇಸ್ ನಲ್ಲಿ ಕಂಚು, 1000 ಮೀ ರಿಂಕ್ ರೇಸ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಉಡುಪಿಯ ಸೈಂಟ್ ಸಿಸಿಲಿ ಶಾಲೆಯ 2 ನೇ ತರಗತಿ ವಿದ್ಯಾರ್ಥಿನಿಯಾದ ಈಕೆ, ಉಡುಪಿ ಆರೋಗ್ಯ ಇಲಾಖೆಯ ಸಿಬ್ಬಂದಿ ಸೆಲ್ವರಾಜ್ ಅವರ ಪುತ್ರಿ,.
ಅಜ್ಜರಕಾಡು ಉಪಾಧ್ಯಾಯ ಸ್ಕೇಟಿಂಗ್ ಕ್ಲಬ್ ಸದಸ್ಯೆಯಾದ ಇವರು ಅಂಬಲಪಾಡಿಯ ಲಕ್ಷ್ಮೀ ನಾರಾಯಣ ಉಪಾಧ್ಯಾಯರಿಂದ ತರಬೇತಿ ಪಡೆಯುತ್ತಿದ್ದಾರೆ.