ಉಡುಪಿ, ಜೂನ್ 27: ಉಡುಪಿ ಜಿಲ್ಲೆಯಲ್ಲಿ ಇದೀಗ ಮಲೇರಿಯಾವು ನಿಯಂತ್ರಣದಲ್ಲಿದ್ದು, ಮಲೇರಿಯಾ ನಿರ್ಮೂಲನೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜನರ ಸಹಕಾರ ಅಗತ್ಯ ಎಂದು ಜಿಲ್ಲಾ ಪಂಚಾಯತ್ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸಿಂಧೂ ರೂಪೇಶ್ ಹೇಳಿದ್ದಾರೆ.
ಅವರು ಗುರುವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಹಾಗೂ ಉಡುಪಿ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ , ಬೋರ್ಡ್ ಹೈಸ್ಕೂಲ್ ಆರವಣದಲ್ಲಿ ಏರ್ಪಡಿಸಿದ್ದ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಲೇರಿಯಾವನ್ನು ನಿರ್ಮೂಲನೆಗೊಳಸಿಲು ಸಾರ್ವಜನಿಕರ ಸಹಾಕರ ಅಗತ್ಯವಾಗಿದ್ದು, ಈ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಕಾರ್ಯಕ್ರಮಗಳು ಏರ್ಪಡಿಸುವಂತೆ ತಿಳಿಸಿದರು.
ಉಡುಪಿ ನಗರ ಸಭೆಯ ಆಯುಕ್ತ ಆನಂದ್ ಮಾತನಾಡಿ, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹೆಚ್ಚನ ಮಲೇರಿಯಾ ಪ್ರಕರಣಗಳು ಕಾರ್ಮಿಕರಲ್ಲಿ ಕಂಡು ಬರುತಿದ್ದು ಸ್ವಚ್ಚತೆಗೆ ಹೆಚ್ಚಿನ ಗಮನಕೊಡುವಂತೆ ಆರೋಗ್ಯ ಪರಿವೀಕ್ಷಕರಿಗೆ ಸೂಚಿಸಿದ್ದು, ಸಾರ್ವಜಿಕರೂ ಸಹ ನಗರಸಭೆಯೊಂದಿಗೆ ಸಹಕರಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರಶಾಂತ್ ಭಟ್, ಚ್ಯವ್ಹನ ಡಯೊಗ್ನೋಸ್ಟಿಕ್ ಸೆಂಟರ್ನ ಪಿ.ಎ ಭಟ್, ಧನ್ವಂತರಿ ನರ್ಸಿಂಗ್ ಕಾಲೇಜಿನ ಶಿವಪ್ರಸಾದ್, ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಸುದಿನ, ಎಂಟಮೊಲಾಜಿಸ್ಟ್ ಮುಕ್ತ, ಜಿಲ್ಲಾಆರೋಗ್ಯ ಮೇಲ್ವೀಚಾರಕರಾದ ಕೆ. ಕೃಷ್ಣಪ್ಪ, ಕಿರಿಯ ಆರೋಗ್ಯ ನಿರೀಕ್ಷಕರಾದ ವಸಂತ್ಕುಮಾರ್ ಹಾಗೂ ಪ್ರಸನ್ನ ಉಪಸ್ಥಿತರಿದ್ದರು.
ಬೋಡ್ ್ ಹೈಸ್ಕೂಲ್ ನಿಂದ ಅಜ್ಜರಕಾಡು ಪುರಭವನದವರಗೆ ನಡೆದ ಜಾಥಾ ಕಾರ್ಯಕ್ರಮದಲ್ಲಿ ಧನ್ವಂತರಿ ನರ್ಸಿಂಗ್ ಕಾಲೇಜು, ವಿದ್ಯಾರ್ತತ್ನ ನರ್ಸಿಂಗ್ ಕಾಲೇಜ್, ಮಿತ್ರ ಸ್ಕೂಲ್ ಆಫ್ ನರ್ಸಿಂಗ್ , ಲೊಂಬಾರ್ಡ್ ಮೆಮೋರಿಯಲ್ ಸ್ಕೂಲ್ ಆಫ್ ನರ್ಸಿಂಗ್, ಸರಕಾರಿ ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ ಇಲ್ಲಿನ ವಿದ್ಯಾರ್ಥಿಗಳು ಹಾಗೂ ನಗರ ಆರೋಗ್ಯ ಕೇಂದ್ರ ಉಡುಪಿ ಹಾಗೂ ನಗರ ಆರೋಗ್ಯ ಕೇಂದ್ರ ಮಣಿಪಾಲ ಇಲ್ಲಿನ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು, ಮಲೇರಿಯಾ ಲಿಂಕ್ಕಾರ್ಯಕರ್ತರು, ಇ.ಡಿ.ಸಿ.ಟಿ ಕಾರ್ಯಕರ್ತರು ಭಾಗವಹಿಸಿದ್ದರು.