ಪ್ರಾದೇಶಿಕ ಬ್ಯಾಂಕಿಂಗ್ ವಲಯದಲ್ಲಿ (ಆರ್ಆರ್ಬಿ) ನಡೆಯುತ್ತಿರುವ ಈ ನೇಮಕಾತಿಯಲ್ಲಿ ಒಟ್ಟು 8594 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ಗೆ 606 ಮತ್ತು ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ನ ಒಟ್ಟು 200 ಹುದ್ದೆಗಳ ಭರ್ತಿಗೂ ಅಧಿಸೂಚನೆ ಹೊರಡಿಸಲಾಗಿದೆ. ದೇಶದ ವಿವಿಧ ಬ್ಯಾಂಕಿಂಗ್ ವಲಯದಲ್ಲಿ ಖಾಲಿ ಇರುವ ಹುದ್ದೆ ನೇಮಕಾತಿಗೆ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಜೂನ್ 21 ಕಡೆಯ ದಿನವಾಗಿದೆ.
ಹುದ್ದೆ ವಿವರ: ಐಬಿಪಿಎಸ್ನ ಆರ್ಆರ್ಬಿ ಹುದ್ದೆಗಳ ಭರ್ತಿ ನಡೆಯಲಿದೆ. ಇದರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನ 606 ಹುದ್ದೆ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ 200 ಹುದ್ದೆಗಳ ಭರ್ತಿ ನಡೆಯಲಿದೆ.
ಕರ್ನಾಟಕ ಪ್ರಾದೇಶಿಕ ಬ್ಯಾಂಕ್ನಲ್ಲಿ ಆಫೀಸರ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) 450 ಹುದ್ದೆ, ಆಫೀಸರ್ ಸ್ಕೇಲ್-1 (ಅಸಿಸ್ಟೆಂಟ್ ಮ್ಯಾನೇಜರ್)- 350 ಹುದ್ದೆ, ಆಫೀಸರ್ ಸ್ಕೇಲ್ 2- 4 (ಕಾನೂನು), ಆಫೀಸರ್ ಸ್ಕೇಲ್ 2 (ಸಿಎ)- 2 ಹುದ್ದೆಗಳ ಭರ್ತಿ ನಡೆಯಲಿದೆ.
ವಿದ್ಯಾರ್ಹತೆ:
ಆಫೀಸರ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಹುದ್ದೆಗೆ ಪದವಿ,
ಆಫೀಸರ್ ಸ್ಕೇಲ್-1 (ಅಸಿಸ್ಟೆಂಟ್ ಮ್ಯಾನೇಜರ್) – ಪದವಿ,
ಆಫೀಸರ್ ಸ್ಕೇಲ್ 2- 4 (ಕಾನೂನು)- ಎಲ್ಎಲ್ಬಿ,
ಆಫೀಸರ್ ಸ್ಕೇಲ್ 2 (ಸಿಎ)- 2 – ಸಿಎ
ವಯೋಮಿತಿ:
ಆಫೀಸರ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಹುದ್ದೆಗೆ 18 ರಿಂದ 28 ವರ್ಷ,
ಆಫೀಸರ್ ಸ್ಕೇಲ್-1 (ಅಸಿಸ್ಟೆಂಟ್ ಮ್ಯಾನೇಜರ್) – 18 ರಿಂದ 30 ವರ್ಷ,
ಆಫೀಸರ್ ಸ್ಕೇಲ್ 2- 4 (ಕಾನೂನು)- 18 ರಿಂದ 30 ವರ್ಷ,
ಆಫೀಸರ್ ಸ್ಕೇಲ್ 2 (ಸಿಎ)- 2 – 21 ರಿಂದ 32 ವರ್ಷ
ವಯೋಮಿತಿ ಸಡಿಲಿಕೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪ.ಜಾ, ಪ.ಪಂ, ವಿಕಲಚೇತನ ಅಭ್ಯರ್ಥಿಗೆ 175 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ. ಇತರ ಅಭ್ಯರ್ಥಿಗಳಿಗೆ 850 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.
: ಅಭ್ಯರ್ಥಿಗಳನ್ನು ಮೂರು ಹಂತದಲ್ಲಿ ಆಯ್ಕೆ ಮಾಡಲಾಗುವುದು. ಮೊದಲಿಗೆ ಪ್ರಿಲಿಮಿನರಿ ಎಕ್ಸಾಮಿನೇಷನ್ ನಂತರ ಮುಖ್ಯ ಪರೀಕ್ಷೆ (ಬಹು ಆಯ್ಕೆ) ಕಡೆಯದಾಗಿ ಸಂದರ್ಶನ ಮೂಲಕ ಆಯ್ಕೆ ನಡೆಸಲಾಗುವುದು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅಧಿಕೃತ ಜಾಲತಾಣವಾದ ibps.in ಭೇಟಿ ನೀಡಿ ಅಧಿಸೂಚನೆಯನ್ನು ಮೊದಲು ಸರಿಯಾಗಿ ಗಮನಿಸಬೇಕು. ಬಳಿಕ ಅರ್ಜಿ ಭರ್ತಿಗೆ ಮುಂದಾಗಬೇಕು. ಅಗತ್ಯ ದಾಖಲಾತಿ, ಮಾಹಿತಿಗಳೊಂದಿಗೆ ನಿಗದಿತದ ದಿನಾಂಕಕ್ಕೆ ಮುನ್ನ ಅರ್ಜಿ ಸಲ್ಲಿಕೆ ಮಾಡಬೇಕು.