ಶರ್ಟ್​ಲೆಸ್ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡ ಫಿಟ್ನೆಸ್​ ಐಕಾನ್​ ಹೃತಿಕ್​ ರೋಷನ್

ನಟ ಹೃತಿಕ್​ ರೋಷನ್​ ಹಿಂದಿ ಚಿತ್ರರಂಗದ ಫಿಟ್ನೆಸ್​ ಸೆಲೆಬ್ರಿಟಿಗಳಲ್ಲಿ ಒಬ್ಬರು. ಬಾಲಿವುಡ್​ ನಟರಲ್ಲಿ ಹೃತಿಕ್ ರೋಷನ್ ಮಾತ್ರ ನೋಟ, ಫಿಟ್‌ನೆಸ್, ನಟನೆ, ನೃತ್ಯ ಮತ್ತು ಆಯಕ್ಷನ್‌ನಲ್ಲಿ ಯಾವುದೇ ಹಾಲಿವುಡ್ ನಟರನ್ನಾದರೂ ಸೋಲಿಸಲು ಸಮರ್ಥರಾಗಿದ್ದಾರೆ.ಬಾಲಿವುಡ್​ ನಟ ಹೃತಿಕ್​ ರೋಷನ್​ ಶರ್ಟ್​ಲೆಸ್ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಫೋಟೋ ಶೇರ್​ ಮಾಡಿಕೊಂಡಿರುವ ನಟ, ‘ಹಿಂದಿನ ದಿನ’ ಎಂದು ಕ್ಯಾಪ್ಶನ್​ ನೀಡಿದ್ದಾರೆ. ಚಿತ್ರದಲ್ಲಿ, ಅವರು ಶರ್ಟ್ ರಹಿತವಾಗಿ ತಮ್ಮ ಬೆನ್ನನ್ನು ಪ್ರದರ್ಶಿಸುವುದನ್ನು ಕಾಣಬಹುದು. ಜೊತೆಗೆ ಕಪ್ಪು ಟೋಪಿ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಕೈ ಬಿಟ್ಟ ತಕ್ಷಣ ಅಭಿಮಾನಿಗಳು ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ
ಇವರು ಜಿಮ್​ನಲ್ಲಿ ದೇಹವನ್ನು ದಂಡಿಸುತ್ತಾ ಸಖತ್​ ವರ್ಕೌಟ್​ ಮಾಡುತ್ತಾರೆ. ಇದೀಗ ನಟ, ತನ್ನ ಶರ್ಟ್​ಲೆಸ್ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ದಂಡಿಸಿದ ದೇಹವನ್ನು ತೋರಿಸುತ್ತಾ ಅಭಿಮಾನಿಗಳಿಗೆ ಟ್ರೀಟ್​ ನೀಡಿದ್ದಾರೆ. ಇದು ಇಂಟರ್ನೆಟ್​ಗೆ ಕಿಚ್ಚು ಹಚ್ಚಿದೆ.​​

ಬಳಕೆದಾರರೊಬ್ಬರು, “ನೀವು ಈ ಜಗತ್ತಿನಲ್ಲಿ ಅತ್ಯಂತ ಸುಂದರ ಮತ್ತು ವಿನಮ್ರ ವ್ಯಕ್ತಿ, ನಿಜವಾಗಿಯೂ ನಾನು ನಿಮ್ಮ ದೊಡ್ಡ ಅಭಿಮಾನಿ.” ಎಂದು ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು, “ಹಾಟೆಸ್ಟ್ ಹೃತಿಕ್ ರೋಷನ್ ಸರ್” ಎಂದು ಬರೆದಿದ್ದಾರೆ. “49 ವರ್ಷವಾದರೂ ನಿಮ್ಮ ದೇಹದ ಫಿಟ್ನೆಸ್​ ಕಾಯ್ದುಕೊಂಡದ್ದು ನಿಜಕ್ಕೂ ಆಶ್ಚರ್ಯ” ಎಂದು ಪ್ರತಿಕ್ರಿಯಿಸಿದ್ದಾರೆ.

ಹೃತಿಕ್​ ರೋಷನ್​ ಸಿನಿಮಾ ವಿಚಾರವಾಗಿ ನೋಡುವುದಾದರೆ, ನಟ ಕೊನೆಯದಾಗಿ ಸೈಫ್ ಅಲಿ ಖಾನ್ ಅವರೊಂದಿಗೆ ಆಕ್ಷನ್ ಥ್ರಿಲ್ಲರ್ ಚಿತ್ರ ವಿಕ್ರಮ್ ವೇದದಲ್ಲಿ ಕಾಣಿಸಿಕೊಂಡರು. ಹೃತಿಕ್​ ಮುಂದೆ ಸಿದ್ಧಾರ್ಥ್​ ಆನಂದ್​ ಅಚರ ಫೈಟರ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫೈಟರ್ ಜನವರಿ 25, 2024 ರಂದು ಥಿಯೇಟರ್‌ಗಳಿಗೆ ಬರಲಿದೆ. ಇದರ ಜೊತೆಗೆ, ಜೂನಿಯರ್ ಎನ್‌ಟಿಆರ್ ಜೊತೆಗೆ ಅಯಾನ್ ಮುಖರ್ಜಿಯವರ ವಾರ್ 2 ನಲ್ಲೂ ಹೃತಿಕ್​ ರೋಷನ್​ ನಟಿಸಲಿದ್ದಾರೆ.

ಎರಡು ತಿಂಗಳ ಹಿಂದೆ ಹೃತಿಕ್​ ರೋಷನ್​ ಫಿಟ್ನೆಸ್​ ಫೋಟೋವನ್ನು ಹಂಚಿಕೊಂಡಿದ್ದರು. “ನಾನು ಈ ಫೋಟೋವನ್ನು 2022ರ ನವೆಂಬರ್​ನಲ್ಲಿ ತೆಗೆದುಕೊಂಡಿದ್ದೇನೆ. ಆದರೆ, ಸರಿಯಾದ ನಿದ್ರೆ ಮತ್ತು ಪೌಷ್ಠಿಕ ಆಹಾರದಿಂದ ಈ ದೇಹವನ್ನು ನಾನು ಇಂದಿಗೂ ಸ್ಥಿರವಾಗಿರಿಸಿದ್ದೇನೆ. ಕೆಲವರಿಗೆ ಆಹಾರ ಮತ್ತು ನಿದ್ರೆ ತಮಾಷೆ ಎನಿಸಬಹುದು. ಆದರೆ, ಇದು ನಿಮ್ಮ ಮನಸ್ಸು ಶಾಂತವಾಗಿರಿಸಲು ಸಹಾಯಕವಾಗಿದೆ. ಜೊತೆಗೆ ವ್ಯಾಯಾಮ ಮಾಡುವುದು ಮತ್ತು ಜಿಮ್​ಗೆ ಹೋಗುವುದು ಕೂಡ ಒಳ್ಳೆಯದು. ಅದರೊಂದಿಗೆ ಧ್ಯಾನ ಕೂಡ ನಮ್ಮ ಸಂತೋಷವನ್ನು ದುಪ್ಪಟ್ಟು ಮಾಡಲು ಸಹಕಾರಿಯಾಗುತ್ತದೆ. ಆದರೆ, ಇದೆಲ್ಲವೂ ನಿಮಗೆ ನೀರಸ ಎನಿಸಬಹುದು. ಈ ರೀತಿಯ ಪರಿಶ್ರಮದಿಂದ ವಿಸ್ಮಯ ಸಂಭವಿಸಬಹುದು” ಎಂದು ಬರೆದುಕೊಂಡಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದರು.