ದೊಡ್ಡಣ್ಣಗುಡ್ಡೆ: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ತೋಟಗಾರಿಕಾ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ರೋಬೋಸಾಫ್ಟ್ ಟೆಕ್ನಾಲಜೀಸ್ ಪ್ರೈ.ಲಿ ಸಹಯೋಗದಲ್ಲಿ ಜೂನ್ 22 ರಿಂದ 25 ರವರೆಗೆ ದೊಡ್ಡಣ್ಣಗುಡ್ಡೆ ಪುಷ್ಪ ಹರಾಜು ಕೇಂದ್ರ, ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ ಹಲಸು ಮೇಳ-2023 ಅನ್ನು ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಜಾತಿ ಹಲಸಿನ ಹಣ್ಣಿನ ಮಾರಾಟ, ಹಲಸಿನ ಖಾದ್ಯಗಳು, ಹಲಸಿನ ಗಿಡಗಳ ಮಾರಾಟ ಹಾಗೂ ವಿಚಾರ ಸಂಕಿರಣ ನಡೆಯಲಿದೆ.
ಮಳಿಗೆಗಳನ್ನು ತೆರೆಯಲು ಇಚ್ಛಿಸುವ ರೈತರು ಸಹಾಯಕ ತೋಟಗಾರಿಕಾ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.
ಸಂಪರ್ಕ ಸಂಖ್ಯೆ: 9900910948












