ಉಡುಪಿ: ಮುಚ್ಲಕೋಡಿನ ದೇವಸ್ಥಾನದಲ್ಲಿ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಲು ಖುದ್ದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಾವಿಗಿಳಿದಿರುವ ಘಟನೆ ನಡೆದಿದೆ.
ಭಾನುವಾರದಂದು ಸ್ವಾಮೀಜಿಗಳು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬೆಕ್ಕಿನ ಮರಿ 40 ಅಡಿ ಆಳದ ಬಾವಿಗೆ ಬಿದ್ದಿರುವುದನ್ನು ಕಂಡಿದ್ದಾರೆ. ಬೆಕ್ಕಿನ ಮರಿಯನ್ನು ಮೇಲೆತ್ತಲು ಬಕೆಟ್ ಗೆ ಹಗ್ಗ ಕಟ್ಟಿ ಬಾವಿಗೆ ಬಿಟ್ಟಿದ್ದರೂ ಬೆಕ್ಕಿನ ಮರಿಗೆ ಬಕೆಟ್ ಒಳಗೆ ಬರಲು ಆಗಿರಲಿಲ್ಲ. ಕಟ್ಟಕಡೆಗೆ ಸ್ವಾಮೀಜಿಯವರೇ ಹಗ್ಗದ ಸಹಾಯದಿಂದ ಬಾವಿಗಿಳಿದು ಬೆಕ್ಕಿನ ಮರಿಯನ್ನು ಮೇಲೆತ್ತಿ ರಕ್ಷಿಸಿದ್ದಾರೆ.