ಉಡುಪಿ: ಕೊಡವೂರು ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಆಶ್ರಯದಲ್ಲಿ, ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಮತ್ತು ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘ ಇವರ ಸಹಯೋಗದಲ್ಲಿ ಉಡುಪಿಯ ನಿತ್ಯಾನಂದ ಮಠ ಮಂದಿರದಲ್ಲಿ 7ನೇಯ ಮಿನಿ ಉದ್ಯೋಗ ಮೇಳ ನಡೆಯಿತು.
ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿ, ಉದ್ಯೋಗ ಯುವಕರಿಗೆ ಭದ್ರತೆಯನ್ನು ನೀಡುತ್ತದೆ ಮತ್ತು ಈ ಭದ್ರತೆಯಿಂದ ಸಮಾಜಕ್ಕೆ ಬೆಳಕಾಗುತ್ತದೆ. ನ್ಯಾಯ ನೀತಿ ಧರ್ಮದಲ್ಲಿ ನಡೆದಾಗ ನಮಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ವಿಜಯ್ ಕೊಡವೂರು ನೇತೃತ್ವದ ಕಾರ್ಯ ಶ್ಲಾಘನೀಯ ಎಂದರು.
ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿ ಉದ್ಯೋಗ ಮೇಳ ಯುವಕರ ಜೀವನದಲ್ಲಿ ದಿಕ್ಸೂಚಿಯಾಗಲಿದೆ ಇದರಿಂದ ಯುವಕರಿಗೆ ಒಳ್ಳೆಯ ದಿಕ್ಕು ಸಿಗಲಿ, ಅವರು ಸಮಾಜದ ಉತ್ತಮ ಪ್ರಜೆಯಾಗಲಿ, ಸಮಾಜದ ಸಮಸ್ಯೆಗಳಿಗೆ ಉತ್ತರ ಕೊಡುವಂತಹ ವ್ಯಕ್ತಿಗಳಾಗಲಿ ಎಂದರು.
ಎಲ್ಲರಿಗೂ ಉದ್ಯೋಗ ಸಿಗಲೆಂದು ನಾವು ಏಳನೆಯ ಉದ್ಯೋಗ ಮೇಳವನ್ನು ಇತರ ಸಂಸ್ಥೆಗಳೊಂದಿಗೆ ಆಯೋಜನೆ ಮಾಡಿದ್ದೇವೆ. ಇದಕ್ಕೆ ಅನೇಕ ಕಾರ್ಯಕರ್ತರು ದುಡಿದಿದ್ದಾರೆ. ಆ ದುಡಿಮೆಗೆ ಫಲ ಸಿಗಬೇಕಾದರೆ ಯುವಕರಿಗೆ ಒಳ್ಳೆಯ ಉದ್ಯೋಗ ಸಿಗಬೇಕು ಮಾತ್ರವಲ್ಲದೆ ಅವರು ಒಳ್ಳೆಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಬೇಕಾಗಿದೆ ಎಂದರು.
ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ , ಪೋಷಕರ ಮತ್ತು ಶಿಕ್ಷಕರ ಸಂಘದ ಸಂಸ್ಥಾಪಕ ಮಿಥೇಶ್ ಕುಮಾರ್, ಕೈಗಾರಿಕೋದ್ಯಮಿ ಲಕ್ಷ್ಮೀಕಾಂತ್ ಬೆಸ್ಕೋರು, ಉದ್ಯೋಗದಾತ ಕಂಪನಿಗಳು ಹಾಜರಿದ್ದರು.