ಸಿಇಟಿ ಫಲಿತಾಂಶ: ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಎಸ್.ಎಚ್. ಪ್ರಥಮ ರ್ಯಾಂಕ್

ಮಂಗಳೂರು: ಮಂಗಳೂರಿನ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜಿನ ಬೈರೇಶ್ ಎಸ್.ಎಚ್. ಅವರು ಸಿಇಟಿ ಬಿಎಸ್ಸಿ ಕೃಷಿಯಲ್ಲಿ ಪ್ರಥಮ, ಬಿಎನ್‍ವೈಎಸ್‍ನಲ್ಲಿ ದ್ವಿತೀಯ, ನರ್ಸಿಂಗ್, ಬಿ – ಫಾರ್ಮಾ, ಫಾರ್ಮಾ ಡಿ ಮತ್ತು ಪಶುವೈದ್ಯಕೀಯದಲ್ಲಿ 4ನೇ ಹಾಗೂ ಎಂಜಿನಿಯರಿಂಗ್‍ನಲ್ಲಿ 16ನೇ ರ್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಏಳು ವಿಭಾಗದ ಮೊದಲ ಹತ್ತು ರ್ಯಾಂಕ್‍ಗಳಲ್ಲಿ ಆರು ರ್ಯಾಂಕ್‍ಗಳನ್ನು ಬೈರೇಶ್ ಎಸ್.ಎಚ್. ಪಡೆದುಕೊಂಡು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆಯಲ್ಲಿ 720ರಲ್ಲಿ 710 ಅಂಕ ಪಡೆದ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಎಸ್.ಎಚ್. ಜನರಲ್ ಮೆರಿಟ್ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 48ನೇ ರ್ಯಾಂಕ್ ಪಡೆದಿದ್ದರು. ಕಳೆದ 19 ವರ್ಷಗಳಲ್ಲಿ ಬೋರ್ಡ್ ಸೇರಿದಂತೆ ನಾನಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 23 ಬಾರಿ ಪ್ರಥಮ ರ್ಯಾಂಕ್ ಪಡೆದಿರುವ ಮಂಗಳೂರಿನ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜು ಈ ವರ್ಷವೂ ಅಭೂತಪೂರ್ವ ಫಲಿತಾಂಶ ದಾಖಲಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ನೇ ಸಾಲಿನ ಸಿಇಟಿ ಪರೀಕ್ಷೆಯ ಏಳು ವಿಭಾಗದ ಮೊದಲ 10 ರ್ಯಾಂಕ್‍ಗಳಲ್ಲಿ 7 ರ್ಯಾಂಕ್, ಮೊದಲ 50 ರ್ಯಾಂಕ್‍ನಲ್ಲಿ 20 ರ್ಯಾಂಕ್ ಹಾಗೂ ಮೊದಲ 100 ರ್ಯಾಂಕ್‍ನಲ್ಲಿ 47 ರ್ಯಾಂಕ್, ಮೊದಲ 150ರಲ್ಲಿ 77 ರ್ಯಾಂಕ್, ಮೊದಲ 200 ರ್ಯಾಂಕ್‍ಗಳಲ್ಲಿ 116, ಮೊದಲ 300 ರ್ಯಾಂಕ್‍ಗಳಲ್ಲಿ 169 ರ್ಯಾಂಕ್‍ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದರು.

ಕಾಲೇಜಿನ ವಿದ್ಯಾರ್ಥಿಗಳಾದ ರಾಹುಲ್ ವೈ ಬಿಎಸ್ಸಿ ಕೃಷಿಯಲ್ಲಿ 19, ಪಶುವೈದ್ಯಕೀಯದಲ್ಲಿ 22, ನರ್ಸಿಂಗ್‍ನಲ್ಲಿ 22, ಬಿಎನ್‍ವೈಎಸ್‍ನಲ್ಲಿ 26, ಬಿ ಫಾರ್ಮಾ ಮತ್ತು ಡಿ ಫಾರ್ಮಾದಲ್ಲಿ 43ನೇ ರ್ಯಾಂಕ್, ಅದಿತಿ ಬಿ.ಎನ್. ಅವರಿಗೆ ಬಿಎಸ್ಸಿ ಕೃಷಿಯಲ್ಲಿ 24, ಬಿಎನ್‍ವೈಎಸ್‍ನಲ್ಲಿ 61ನೇ ರ್ಯಾಂಕ್, ಮಧುಪ್ರೀಯಾ ಅವರಿಗೆ ಎಂಜಿನಿಯರಿಂಗ್‍ನಲ್ಲಿ 26, ಬಿಎಸ್ಸಿ ಕೃಷಿಯಲ್ಲಿ 37, ಬಿ ಫಾರ್ಮಾ ಮತ್ತು ಡಿ ಫಾರ್ಮಾದಲ್ಲಿ 92ನೇ ರ್ಯಾಂಕ್, ಶ್ರೀವತ್ಸ ಲಕ್ಷ್ಮಣ ಹೆಗಡೆ ಅವರಿಗೆ ಬಿಎಸ್ಸಿ ಕೃಷಿಯಲ್ಲಿ 35, ಬಿಎನ್‍ವೈಎಸ್‍ನಲ್ಲಿ 52, ಪಶುವೈದ್ಯಕೀಯ ಹಾಗೂ ನರ್ಸಿಂಗ್‍ನಲ್ಲಿ 97ನೇ ರ್ಯಾಂಕ್, ಸೋಮಶೇಖರ್ ಆರ್. ನಡುವಿನಮನಿ ಬಿಎನ್‍ವೈಎಸ್‍ನಲ್ಲಿ 42ನೇ ರ್ಯಾಂಕ್, ಪಶು ವೈದ್ಯಕೀಯದಲ್ಲಿ 68, ನರ್ಸಿಂಗ್‍ನಲ್ಲಿ 68ನೇ ರ್ಯಾಂಕ್, ವರುಣ್ ಕೆ.ಆರ್. ಕೃಷಿಯಲ್ಲಿ 55, ಬಿಎನ್‍ವೈಎಸ್‍ನಲ್ಲಿ 85, ಪಶುವೈದ್ಯಕೀಯ ಹಾಗೂ ನರ್ಸಿಂಗ್‍ನಲ್ಲಿ 99ನೇ ರ್ಯಾಂಕ್, ಸ್ವಸ್ತಿಕ್ ಐಲ್ ಪಶು ಕೃಷಿಯಲ್ಲಿ 46, ಬಿಎನ್‍ವೈಎಸ್ 55, ಪಶುವೈದ್ಯಕೀಯದಲ್ಲಿ 83ನೇ ರ್ಯಾಂಕ್, ಸುಭಾಷ್ ಗೌಡ ಕೆ.ಎಸ್ ಕೃಷಿ ಪ್ರಾಯೋಗಿಕ 7, ಬಿಎನ್‍ವೈಎಸ್ 58, ಕೃಷಿಯಲ್ಲಿ 69, ಪಶು ವೈದ್ಯಕೀಯದಲ್ಲಿ 71, ನರ್ಸಿಂಗ್‍ನಲ್ಲಿ 71ನೇ ರ್ಯಾಂಕ್, ಧೀಮಂತ್ ಜೆ. ಎಂಜಿನಿಯರಿಂಗ್‍ನಲ್ಲಿ 60ನೇ ರ್ಯಾಂಕ್, ಹೇಮಚಂದ್ರ ಸಿ. ಕೃಷಿಯಲ್ಲಿ 62ನೇ ರ್ಯಾಂಕ್, ಪ್ರೀತಂ ಚಂದ್ರ ಬಿ. ಯಡಗೆರೆ ಎಂಜಿನಿಯರಿಂಗ್‍ನಲ್ಲಿ 67ನೇ ರ್ಯಾಂಕ್, ಸಮೃದ್ಧ ಮುಖ್ಯೋಪಾಧ್ಯಾಯ ಎಂಜಿನಿಯರಿಂಗ್‍ನಲ್ಲಿ 75ನೇ ರ್ಯಾಂಕ್, ಅಚಿಂತ್ಯ ಅರವಿಂದ ರೈ ಎಂಜಿನಿಯರಿಂಗ್‍ನಲ್ಲಿ 78ನೇ ರ್ಯಾಂಕ್, ಸಮರ್ಥ್ ಸಿ. ಶೆಟ್ಟಿ ಬಿಎನ್‍ವೈಎಸ್‍ನಲ್ಲಿ 72ನೇ ರ್ಯಾಂಕ್, ಅಪೂರ್ವ ಅಸುತಿ ಅವರು ಕೃಷಿಯಲ್ಲಿ 91ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಏಳು ವಿಭಾಗದ ಮೊದಲ 100 ರ್ಯಾಂಕ್‍ಗಳಲ್ಲಿ 47 ರ್ಯಾಂಕ್‍ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಸಾಂಘಿಕ ಪ್ರಯತ್ನದಿಂದಾಗಿ ಉತ್ತಮ ಫಲಿತಾಂಶ ಬಂದಿದೆ. `ಶ್ರಮ ಏವ ಜಯತೆ’ ಎಂಬ ಸಂಸ್ಥೆಯ ಧ್ಯೇಯ ವಾಕ್ಯವನ್ನು ವಿದ್ಯಾರ್ಥಿಗಳು ಸಾಕಾರಗೊಳಿಸಿರುವ ಬಗ್ಗೆ ಹೆಮ್ಮೆಯಾಗುತ್ತಿದೆ. ಈ ಎಲ್ಲ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಎಕ್ಸ್‍ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪೆÇ್ರ. ನರೇಂದ್ರ ಎಲ್. ನಾಯಕ್ ಅವರು ತಿಳಿಸಿದ್ದಾರೆ.

ವೈದ್ಯಕೀಯ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಮಟ್ಟದ ಪರೀಕ್ಷೆ ನೀಟ್‍ನಲ್ಲಿ ರಾಜ್ಯಕ್ಕೆ ಎರಡನೇ ಟಾಪರ್, ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸುವ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಟಾಪರ್ ಆಗಿ ಸಂಸ್ಥೆಯ ವಿದ್ಯಾರ್ಥಿಗಳು ಹೊರಹೊಮ್ಮಿದ್ದಾರೆ. ಬೋರ್ಡ್ ಪರೀಕ್ಷೆಯಲ್ಲಿ ಕಾಲೇಜಿನ ಶೇ. 99.52ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇದರೊಂದಿಗೆ ವೈದ್ಯಕೀಯ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿರುವ ನೀಟ್‍ನಲ್ಲಿ ಶೇ. 96ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

ಹೀಗೆ ಪದವಿ ಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿವರ್ಷ ಎಕ್ಸ್‍ಪರ್ಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮಾಡುವ ಸಾಧನೆಯ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದು ಎಕ್ಸ್‍ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್.ನಾಯಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಕ್ಸ್‍ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್.ನಾಯಕ್, ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಶ್ರೀ ಅಂಕುಶ್ ಎನ್ ನಾಯಕ್, ವಾಸ್ತುತಜ್ಞೆ ದೀಪಿಕಾ ಎ.ನಾಯಕ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ.ವಿಜಯನ್, ಪ್ರೊ.ರಾಮಚಂದ್ರ ಭಟ್ ಅವರು ಉಪಸ್ಥಿತರಿದ್ಧರು.