ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸಾಪ್ ತನ್ನ ಬಳಕೆದಾರರಿಗೆ ಮೋಜಿನ ಅನುಭವವನ್ನು ನೀಡಲು ನಿರಂತರವಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಹೊರತರುತ್ತಿದೆ. ಈಗ ಜನಪ್ರಿಯ ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ಲ್ಯಾಪ್ಟಾಪ್ಗಳು ಮತ್ತು ಡೆಸ್ಕ್ಟಾಪ್ಗಳ ಕೆಲವು ಬೀಟಾ ಪರೀಕ್ಷಕರಿಗೆ ಮೆಸೇಜ್ ಎಡಿಟಿಂಗ್ ಫೀಚರ್ ಅನ್ನು ಪ್ರಸ್ತುತ ಪಡಿಸಿದೆ. ಅದರ ಸಹಾಯದಿಂದ, ಬಳಕೆದಾರರು ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡಬಹುದಾಗಿದೆ. ಇದೀಗ ಈ ವೈಶಿಷ್ಟ್ಯವನ್ನು ಕೆಲವು ಬೀಟಾ ಬಳಕೆದಾರರಿಗೆ ಮಾತ್ರ ತರಲಾಗಿದೆ. ಮುಂಬರುವ ಅಪ್ಡೇಟ್ಗಳೊಂದಿಗೆ ಈ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಪರಿಚಯಿಸಲಾಗುತ್ತದೆ. ಕಂಪನಿಯು ಮೇ ತಿಂಗಳಿನಲ್ಲಿಯೇ ಈ ಅಪ್ಲಿಕೇಶನ್ ಅನ್ನು ಘೋಷಿಸಿದೆ. ಅದರ ಬಗ್ಗೆ ವಿವರವಾಗಿ ತಿಳಿಯಲು ಕೆಳಗೆ ಓದಿ. ಮೆಟಾ-ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್ಫಾರ್ಮ್ WhatsApp ವಿಂಡೋಸ್ ಬೀಟಾದಲ್ಲಿ ಸಂದೇಶ ಎಡಿಟಿಂಗ್ ವೈಶಿಷ್ಟ್ಯವನ್ನು ಹೊರತರುತ್ತಿದೆ. ಬೀಟಾ ಬಳಕೆದಾರರಿಗೆ ಈಗ ಮೆಸೇಜ್ ಮೆನುವಿನಲ್ಲಿ ಎಡಿಟ್ ಆಪ್ಶನ್ ನೀಡಲಾಗಿದ್ದು, ಇದರ ಉಪಯೋಗದ ಬಗ್ಗೆ ತಿಳಿಯೋಣಾ ಬನ್ನಿ..
WABetainfo, ಮೆಟಾ-ಮಾಲೀಕತ್ವದ ಅಪ್ಲಿಕೇಶನ್ನ ಮುಂಬರುವ ವೈಶಿಷ್ಟ್ಯದ ಮೇಲೆ ಕಣ್ಣಿಟ್ಟಿರುವ ವೆಬ್ಸೈಟ್, ರೋಲಿಂಗ್ ಔಟ್ ಮೆಸೇಜ್ ಎಡಿಟಿಂಗ್ ಕುರಿತು ಮಾಹಿತಿ ನೀಡಿದೆ. ಮೈಕ್ರೋಸಾಫ್ಟ್ ಸ್ಟೋರ್ನಲ್ಲಿ ಲಭ್ಯವಿರುವ ಇತ್ತೀಚಿನ ಅಪ್ಡೇಟ್ ನಂತರ ಕಂಪನಿಯು ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯವನ್ನು ಹೊರತಂದಿದೆ ಎಂದು ಬಹಿರಂಗಪಡಿಸಿದೆ.
ಸ್ಕ್ರೀನ್ಶಾಟ್ ತೆಗೆದುಕೊಂಡಿದ್ದೀರಾ ಎಂದು ತಿಳಿದುಕೊಳ್ಳಿ. ಇದರಲ್ಲಿ ಎಡಿಟ್ ಆಯ್ಕೆಯು ಸಂದೇಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಸಂದೇಶ ಮೆನುವಿನಲ್ಲಿ, ಜನರು ಈಗ ಪ್ರತ್ಯುತ್ತರ, ನಕಲು, ಫಾರ್ವರ್ಡ್, ಸ್ಟಾರ್, ಎಡಿಟ್, ಡಿಲಿಟ್, ಆಯ್ಕೆ ಮತ್ತು ಮಾಹಿತಿಯ ಆಯ್ಕೆಗಳನ್ನು ಪಡೆಯುತ್ತಾರೆ. ಎಡಿಟಿಂಗ್ ಬಟನ್ ಕ್ಲಿಕ್ ಮಾಡುವ ಮೂಲಕ ಸಂದೇಶವನ್ನು ಎಡಿಟ್ ಮಾಡಬಹುದು. ಎಮೋಜಿಗಳ ಲಿಸ್ಟ್ ಸಹ ಈ ಆಯ್ಕೆಗಳ ಕೆಳಗೆ ಘೋಚರಿಸುತ್ತದೆ.
ಆತುರದಲ್ಲಿ ತಪ್ಪು ಸಂದೇಶಗಳನ್ನು ಬರೆಯುವವರಿಗೆ WhatsApp ಸಂದೇಶ ಎಡಿಟ್ ವೈಶಿಷ್ಟ್ಯವು ತುಂಬಾ ಉಪಯುಕ್ತ ವೈಶಿಷ್ಟ್ಯವಾಗಿದೆ. ಈ ಎಡಿಟಿಂಗ್ ಸಹಾಯದಿಂದ ನೀವು ಸಂದೇಶವನ್ನು ಅಳಿಸದೆಯೇ ಅವುಗಳನ್ನು ಸರಿಪಡಿಸಬಹುದಾಗಿದೆ. ಆದ್ರೆ ಈ ಎಡಿಟ್ ಮಾಡುವುದಕ್ಕೆ ಕೇವಲ 15 ನಿಮಿಷಗಳು ಮಾತ್ರ ಸಮಯ ಇರುತ್ತದೆ. ಅಂದರೆ ಜನರು ಸಂದೇಶವನ್ನು ಕಳುಹಿಸಿದ 15 ನಿಮಿಷಗಳಲ್ಲಿ ಆ ಸಂದೇಶವನ್ನು ಎಡಿಟ್ ಮಾಡಬಹುದಾಗಿದೆ. ನಿಮ್ಮ ವಾಟ್ಸಾಪ್ ಅಕೌಂಟ್ಗೆ ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯವನ್ನು ಹೊರತರಲಾಗಿದೆಯೇ ಎಂದು ನೀವು ನೋಡಲು ಬಯಸಿದರೆ, ಸಂದೇಶವೊಂದನ್ನು ಕಳುಹಿಸಿ ಮತ್ತು ನಂತರ ಸಂದೇಶ ಮೆನುವನ್ನು ಪರಿಶೀಲಿಸಿ.
ಇದಲ್ಲದೇ ವಾಟ್ಸಾಪ್ ಹಲವು ಹೊಸ ಫೀಚರ್ಗಳನ್ನು ಹೊರ ತರಲು ಯೋಚಿಸುತ್ತಿದ್ದು, ಅದರ ಬಗ್ಗೆ ಟೆಸ್ಟ್ಗಳ ಪ್ರಕ್ರಿಯೆಗಳು ನಡೆಯುತ್ತಿವೆ. WebBetaInfo ತನ್ನ ವರದಿಯಲ್ಲಿ ಹೊಸ ಆಂಡ್ರಾಯ್ಡ್ ಅಪ್ಡೇಟ್ ಕಾಣಿಸಿಕೊಂಡಿದೆ. ಇದು ವಾಟ್ಸಾಪ್ ಚಾನಲ್ ನೋಟಿಫೈಯರ್ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತೋರಿಸುತ್ತದೆ. ಒಮ್ಮೆ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ನಂತರ, ಬಳಕೆದಾರರು ತಮ್ಮ ಖಾತೆಯಲ್ಲಿ ಚಾನಲ್ ವೈಶಿಷ್ಟ್ಯವು ಲಭ್ಯವಿದ್ದಾಗ ನೋಟಿಫಿಕೇಶನ್ ಸ್ವೀಕರಿಸುತ್ತಾರೆ.
ಇತ್ತೀಚಿನ WhatsApp ಅಪ್ಡೇಟ್ ಅನ್ನು ಇನ್ಸ್ಟಾಲ್ ಮಾಡಿರುವ ಬೀಟಾ ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ಹೊರತರಲಾಗಿದೆ. ಮುಂಬರುವ ಅಪ್ಡೇಟ್ಗಳೊಂದಿಗೆ, ಈ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಲಭ್ಯವಾಗುತ್ತದೆ. ಆದ್ರೆ ಕಂಪನಿಯು ಈ ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯ ಬಗ್ಗೆ ಹೊರ ತರುವ ವಿವರಗಳನ್ನು ಇನ್ನೂ ಹಂಚಿಕೊಂಡಿಲ್ಲ. ಸದ್ಯ ಕಂಪನಿ ಈ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ.