ಉಡುಪಿ: ಕಲ್ಯಾಣಪುರ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರಥಮ ಬಾರಿಗೆ ಶ್ರೀನಿವಾಸ ಕಲ್ಯಾಣ ಮಹೋತ್ಸವವು ದೇವಳದ ಕಲಾ ಮಂದಿರದಲ್ಲಿ ಶನಿವಾರದಂದು ನಡೆಯಿತು.
ಚೇಂಪಿ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ನವಗ್ರಹ ಹೋಮ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಭಜನಾ ಕಾರ್ಯಕ್ರಮ ನಡೆಯಿತು.
ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ದೇವಳದ ಜೀರ್ಣವೋದ್ಧಾರ ಮನವಿ ಪತ್ರ ಬಿಡುಗಡೆಗೊಳಿಸಿ ಶ್ರೀನಿವಾಸ ಕಲ್ಯಾಣದಿಂದ ದೇವಾಲಯದ ಜೀರ್ಣೋದ್ಧಾರ ಕೆಲಸ ಶೀಘ್ರ ಪೂರ್ಣಗೊಂಡು ಭಕ್ತರ ಕಲ್ಯಾಣವಾಗಲಿ ಎಂದು ಆಶೀರ್ವಚನಗೈದರು. ಬಳಿಕ ಶ್ರೀ ದೇವರಿಗೆ ಮಹಾ ಮಂಳಾರತಿ ಬೆಳಗಿಸಿ ಫಲ ಮಂತ್ರಾಕ್ಷತೆ ಪ್ರಸಾದ ನೀಡಿ ಅನುಗ್ರಹಸಿದರು. ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮಾನಾಭ ಕಿಣಿ, ಪ್ರಧಾನ ಅರ್ಚಕ ಜಯದೇವ ಭಟ್ , ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷ ಕೆ. ಮುರಳೀಧರ ಬಾಳಿಗಾ, ಟಿ ಅಶೋಕ್ ಮಾಧವ ಪೈ, ಗಣಪತಿ ಭಟ್, ಅರವಿಂದ ಬಾಳಿಗಾ, ಸುದೇಶ್ ಭಟ್ , ಕಾಶೀನಾಥ್ ಭಟ್, ರಮೇಶ ಭಟ್ , ರಮಾನಾಥ್ ಶಾನುಬೋಗ್ , ಜಿ ಎಸ್ ಬಿ ಸಭಾ ಮಂಡಳಿಯ ಸದಸ್ಯರು, ಜಿ ಎಸ್ ಬಿ ಮಹಿಳಾ ಮತ್ತು ಯುವಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.