ಮಂಗಳೂರು: ಗ್ರಾಮ ವಾಸ್ತವ್ಯ‌ ಮೂಲಕ‌ ಕುಮಾರಸ್ವಾಮಿ ಶೂನ್ಯ ಸಾಧನೆ: ಕೋಟ

ಮಂಗಳೂರು, ಜೂ.25: ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ 1.20 ಕೋಟಿ ಖರ್ಚು ಮಾಡಿ, ಗ್ರಾಮ ವಾಸ್ತವ್ಯದ ಕಲ್ಪನೆ ಅನುಷ್ಠಾನ ಮಾಡುವ ಮೂಲಕ ಶೂನ್ಯ ಸಾಧನೆ ಮಾಡಿದ್ದಾರೆ ಎಂದು‌ ವಿಧಾನ ಪರಿಷತ್ ನಾಯಕ ಕೋಟ ಶ್ರೀನಿವಾಸ ಪೂಜಾರಿ ಲೇವಡಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಇಂದಿನ ಗ್ರಾಮ ವಾಸ್ತವ್ಯಕ್ಕೂ ಮುಂಚೆ, 2006ರಲ್ಲಿ ಗ್ರಾಮ ವಾಸ್ತವ್ಯ ಮಾಡಿದಾಗ ಆ ಗ್ರಾಮದ ನೀರಿನ ಸಮಸ್ಯೆ, ಬಡವರ ಕಲ್ಯಾಣ, ಶಿಕ್ಷಣ ಎಷ್ಟು ಪ್ರಗತಿಯಾಗಿದೆಯೇ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಗ್ರಾಮ ವಾಸ್ತವ್ಯ ಮಾಡಿ ಅಂತ ಸಲಹೆ ನೀಡಿದ್ದೆ ಎಂದರು.
ಬಿಜೆಜಿಯವರು ಸರಕಾರ ನಡೆಸುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ ನಾವು ಹಗಲು ಕನಸು ಕಾಣುತ್ತಿಲ್ಲ ಕಾಂಗ್ರೆಸ್, ಜೆಡಿಎಸ್ ನವರಿಗೆ ಕೆಟ್ಟ ಕನಸ್ಸು ಬೀಳುತ್ತಿದೆ ಎಂದು ಅವರು ತಿಳಿಸಿದರು.